Advertisement

US’s full support ಬಾಂಗ್ಲಾಕ್ಕಿದೆ; ಬೈಡೆನ್ ಭೇಟಿಯಾದ ಮೊಹಮ್ಮದ್ ಯೂನಸ್

08:38 AM Sep 25, 2024 | Team Udayavani |

ನ್ಯೂಯಾರ್ಕ್‌: ಇಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿ ಅಧಿವೇಶನದಲ್ಲಿ ಮಂಗಳವಾರ(ಸೆ 24 )ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿಯಾದರು.

Advertisement

ಮೊಹಮ್ಮದ್ ಯೂನಸ್ ​​ಕಚೇರಿಯ ಪತ್ರಿಕಾ ಹೇಳಿಕೆಯ ಪ್ರಕಾರ, ಬೈಡೆನ್ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ಯುಎಸ್ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರು ಬಾಂಗ್ಲಾದೇಶವನ್ನು ಮರುನಿರ್ಮಾಣ ಮಾಡುವಲ್ಲಿ ಅಮೆರಿಕದ ಸಹಕಾರವನ್ನು ಕೋರಿದರು ಮತ್ತು ವಿದ್ಯಾರ್ಥಿಗಳು ಹಿಂದಿನ ಸರ್ಕಾರದ ದಬ್ಬಾಳಿಕೆಯ ವಿರುದ್ಧ ಹೇಗೆ ಎದ್ದುನಿಂತು ಬಾಂಗ್ಲಾದೇಶವನ್ನು ಪುನರ್ನಿರ್ಮಿಸುವ ಅವಕಾಶವನ್ನು ಸೃಷ್ಟಿಸಲು ಹೋರಾಟ ಮಾಡಿ ದೇಶಕ್ಕಾಗಿ ತ್ಯಾಗ ಮಾಡಿರುವ ಕುರಿತು ವಿವರಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಮಾನವ ಹಕ್ಕುಗಳ ಯುಎನ್ ಹೈ ಕಮಿಷನರ್ ವೋಲ್ಕರ್ ಟರ್ಕ್ ಸೇರಿದಂತೆ ಯುಎನ್ ಅಧಿವೇಶನದಲ್ಲಿ ಯೂನಸ್ ಇತರ ನಾಯಕರನ್ನು ಭೇಟಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next