Advertisement

ಬೈಡನ್ ರನ್ನು ಭೇಟಿ ಮಾಡಲಿರುವ ಜಪಾನ್ ಪ್ರಧಾನಿ ಸುಗಾ

12:14 PM Mar 14, 2021 | Team Udayavani |

ಟೋಕಿಯೊ : ಜಪಾನ್ ನ ಪ್ರಧಾನಿ ಯೋಶಿಹಿದೆ ಸುಗಾ ಅವರು ಏಪ್ರಿಲ್ 9 ರಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಲಿದ್ದಾರೆ. ಶ್ವೇತ ಭವನದಲ್ಲಿ ಬೈಡನ್ ಅವರನ್ನು ಭೇಟಿಯಾಗುತ್ತಿರುವ ಮೊದಲ ವಿದೇಶಿ ನಾಯಕ ಯೋಶಿಹಿದೆ ಎಂದು ಜಪಾನ್ ನ ಯೋಮಿಯುರಿ ಪತ್ರಿಕೆ ಆದಿತ್ಯವಾರ(ಮಾ.14) ಎಂದು ವರದಿ ಮಾಡಿದೆ.

Advertisement

ಓದಿ : ಐಪಿಎಲ್ ಗೆ ಮತ್ತೆರಡು ತಂಡಗಳು ಸೇರ್ಪಡೆ: ಮೇ ತಿಂಗಳಲ್ಲಿ ನಡೆಯಲಿದೆ ಹರಾಜು

ಭಾರತೀಯ ಹಾಗೂ ಫೆಸಿಫಿಕ್ ಸಾಗರಗಳಲ್ಲಿ ಪ್ಯಾಸೇಜ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ  ದ್ವಿಪಕ್ಷೀಯ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಯೋಮಿಯುರಿ ವರದಿಯಲ್ಲಿ ಉಲ್ಲೇಖಿಸಿದೆ.

ಏಪ್ರಿಲ್ ನ ಮೊದಲ ವಾರದಲ್ಲಿ ಸುಗಾ ಭೇಟಿ ನೀಡಲಿದ್ದಾರೆ ಎಂದು ಮುಖ್ಯ ಕ್ಯಾಬಿ ನೆಟ್ ಕಾರ್ಯದರ್ಶಿ ಕಟ್ಸುನೊಬು ಕಟೋ ತಿಳಿಸಿದ್ದಾರೆ.

ಓದಿ : ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ಒಟ್ಟು ಸಂಪತ್ತಿನ ಮೌಲ್ಯವೆಷ್ಟು ಗೊತ್ತಾ..!?

Advertisement
Advertisement

Udayavani is now on Telegram. Click here to join our channel and stay updated with the latest news.

Next