Advertisement

Jobs ಗೋವಾದಲ್ಲೂ ಖಾಸಗಿಯಲ್ಲಿ ಸ್ಥಳೀಯರಿಗೆ ಮೀಸಲು?

01:46 AM Jul 27, 2024 | Team Udayavani |

ಪಣಜಿ: ಕರ್ನಾಟಕದಲ್ಲಿ ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಪ್ರಸ್ತಾವ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಗೋವಾದಲ್ಲೂ ಇದೇ ಮಾದರಿ ಜಾರಿ ಬಗ್ಗೆ ಚಿಂತನೆ ನಡೆದಿದೆ. ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ಒದಗಿಸಲು ರಾಜ್ಯದ ಉದ್ಯೋಗ ವಿನಿಮಯ ಕಾಯ್ದೆಗೆ ತಿದ್ದುಪಡಿ ತರಲಾ ಗುವುದೆಂದು ಗೋವಾ ಸಿಎಂ ಪ್ರಮೋದ್‌ ಸಾವಂತ್‌ ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಆದರೆ, ನಾವು ಖಾಸಗಿಯವರ ಮೇಲೆ ಒತ್ತಡ ಹೇರಲಾಗದು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆ ಮಂಡನೆ ಮಾಡುತ್ತೇವೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next