Advertisement

ರೈಲ್ವೇಯಲ್ಲಿ ಉದ್ಯೋಗ, ಮಾಹಿತಿ ಪಡೆದು ಪರೀಕ್ಷೆ ಎದುರಿಸಿ

07:27 AM Mar 06, 2019 | |

ಜಗತ್ತಿನ ನಾಲ್ಕನೇ ಅತಿದೊಡ್ಡ ರೈಲ್ವೇ ನೆಟ್‌ವರ್ಕ್‌ ಎನಿಸಿಕೊಂಡಿರುವ ಭಾರತೀಯ ರೈಲ್ವೇಯಲ್ಲಿ ವಿವಿಧ ವಿಭಾಗಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ತಮ್ಮ ಅರ್ಹತೆಗಳಿಗೆ ತಕ್ಕುದಾದ ವಿಭಾಗಕ್ಕೆ ವರ್ಷಕ್ಕೆ ಸಾವಿರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ. ಆದರೆ ಇನ್ನೂ ಕೆಲವರಿಗೆ ಯಾವ ಅರ್ಜಿ ಸಲ್ಲಿಸುವುದು, ಬೇಕಾದ ಅರ್ಹತೆ ಬಗ್ಗೆ ಮಾಹಿತಿ ಇರುವುದಿಲ್ಲ. ಇದರಿಂದ ಅರ್ಹರು ಉದ್ಯೋಗ ವಂಚಿತರಾಗುತ್ತಾರೆ. ಆರ್‌ಆರ್‌ಬಿ (ರೈಲ್ವೇ ರಿಕ್ರೂಟ್‌ ಮೆಂಟ್‌ ಬೋರ್ಡ್‌) ರೈಲ್ವೇ ವಿವಿಧ ವಿಭಾಗಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡುತ್ತದೆ. ವರ್ಷದಲ್ಲಿ ಒಂದು ಬಾರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತದೆ. ಆನ್‌ ಲೈನ್‌ ಮೂಲಕ ಅರ್ಜಿ ಭರ್ತಿ ಮಾಡಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. 

Advertisement

ವಿವಿಧ ಇಲಾಖೆ ಎಂದಾಗ ಆಯಾಯಾ ಇಲಾಖೆಗೆ ಸಂಬಂಧಿಸಿದ ವಿದ್ಯಾರ್ಹತೆ ಬೇಕಾಗುತ್ತದೆ. ಎಂಜಿನಿಯರಿಂಗ್‌ ವಿಭಾಗ, ಟಿಟಿ, ವಾಣಿಜ್ಯ, ಸ್ಟೇಶನ್‌ ಮಾಸ್ಟರ್‌ ಸಹಿತ ವಿವಿಧ ವಿಭಾಗಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಅರ್ಜಿದಾರರ ಪದವಿ ಹಾಗೂ ವಯೋಮಿತಿ ಮೊದಲೇ ನಿರ್ಧರಿತವಾಗಿರುತ್ತದೆ.

ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಅರ್ಜಿ ಆಹ್ವಾನಿಸಲಾಗುತ್ತದೆ. 2018- 19ನೇ ಸಾಲಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಮೊದಲಾಗಿ ಇಲಾಖೆ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ನೀಡಲು ಅಧಿಸೂಚನೆ ಹೊರಡಿಸುತ್ತದೆ. ಬಳಿಕ ಆನ್‌ಲೈನ್‌ ಗಳಲ್ಲಿ ಅರ್ಜಿ ಭರ್ತಿ ಮಾಡಲು ದಿನ ನಿಗದಿ ಮಾಡುತ್ತದೆ. ಸುಮಾರು 1 ತಿಂಗಳು ಕಾಲಾವಕಾಶ ನೀಡುತ್ತದೆ. ಈ ಸಮಯದಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಹಿಂದಿರುಗಿಸಲು ಅವಕಾಶ ನೀಡಲಾಗುತ್ತದೆ. ಬಳಿಕ ಪರೀಕ್ಷೆಯ ಶುಲ್ಕವನ್ನು ಪಾವತಿಸಲು ಗಡುವು ನೀಡಲಾಗುತ್ತದೆ. ಸುಮಾರು ಎರಡು ತಿಂಗಳ ಬಳಿಕ ಪರೀಕ್ಷೆ ಗೆ ಆಹ್ವಾನಿಸಲಾಗುತ್ತದೆ.

ಪರೀಕ್ಷೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಕಂಪ್ಯೂಟರ್‌ ಬೇಸ್ಡ್ ಪರೀಕ್ಷೆಗಳೇ (ಸಿಬಿಟಿ) ನಡೆಯುತ್ತದೆ. ಮೊದಲ ಎರಡು ಹಂತಗಳಲ್ಲಿ ಸಿಬಿಟಿ ಪರೀಕ್ಷೆ ಇರುತ್ತದೆ. ಮೂರನೇ ಹಂತದಲ್ಲಿ ದಾಖಲೆಗಳ ಪರಿಶೀಲನೆ, 4ನೇ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಸಿಬಿಟಿ ಪರೀಕ್ಷೆಗಳು 100 ಅಂಕಗಳಿಗೆ ಒಂದೂವರೆ ಗಂಟೆ ಅವಧಿಗೆಯಲ್ಲಿ ಇರುತ್ತದೆ.

ಆನ್‌ಲೈನ್‌ ಅರ್ಜಿ ಹಾಕುವುದು ಹೇಗೆ?
ಅರ್ಜಿ ಸಲ್ಲಿಸಬೇಕಾದ ಲಿಂಕ್‌ ಗೆ ಕ್ಲಿಕ್‌ ಮಾಡಿ. ಅಲ್ಲಿ ಅರ್ಜಿ ಸಲ್ಲಿಸಬೇಕಾದ ಹುದ್ದೆಯನ್ನು ಆಯ್ಕೆ ಮಾಡಿ. ಅಲ್ಲಿ ಅಪ್ಲೈ  ಬಟನ್‌ ಕ್ಲಿಕ್‌ ಮಾಡಿ. ಅದರಲ್ಲಿ ನ್ಯೂ ರಿಜಿಸ್ಟ್ರೇಶನ್‌ ಬಟನ್‌ ಒತ್ತಿ. ಅಗತ್ಯವಿರುವ ಮಾಹಿತಿಗಳನ್ನು ನೀಡಿ ಅರ್ಜಿಯನ್ನು ಭರ್ತಿ ಮಾಡಿ. ಅರ್ಜಿ ಶುಲ್ಕವನ್ನು ಪಾವತಿಸಿ ಬಳಿಕ ಸಬ್‌ಮಿಟ್‌ ಕೊಡಬೇಕು. ಮುಂದಿನ ಅಗತ್ಯಗಳಿಗಾಗಿ ಅರ್ಜಿಯ ಪ್ರಿಂಟ್‌ ತೆಗೆದಿರಿಸಿಕೊಳ್ಳುವುದು ಉತ್ತಮ.

Advertisement

ವೆಬ್‌ ಸೈಟ್‌ ನಲ್ಲಿ ಮಾಹಿತಿ
ರೈಲ್ವೇ ಇಲಾಖೆಗೆ ಯಾವಾಗ ಪರೀಕ್ಷೆಗಳು ನಡೆಯುತ್ತದೆ ಎಂಬುದನ್ನು ಪರಿಶೀಲಿಸಿಕೊಳ್ಳುತ್ತಿರಬೇಕು. ಇಲಾಖೆಯ ವೆಬ್‌ಸೈಟ್‌ಗಳನ್ನು ಗಮನಿಸುತ್ತಿರಬೇಕು. ಅರ್ಜಿ ಹಾಕಿದ ಬಳಿಕ ಪರೀಕ್ಷೆಗೆ ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸಿ. ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. 
– ನಾರಾಯಣನ್‌,
ನಿವೃತ್ತ ರೈಲ್ವೇ ಅಧಿಕಾರಿ

ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next