Advertisement

ಕೆಲಸದಿಂದ ಬ್ರೇಕ್‌ ತೆಗೆದುಕೊಂಡ ಮಹಿಳೆಯರಿಗಾಗಿ ಉದ್ಯೋಗ ಮೇಳ

03:50 PM Sep 16, 2017 | |

ಮದುವೆ, ತಾಯ್ತನ, ವೃದ್ಧರ ಜವಾಬ್ದಾರಿ ಮುಂತಾದ ಕಾರಣಗಳಿಂದ ಉದ್ಯೋಗದಿಂದ ತಾತ್ಕಾಲಿಕವಾಗಿ ಬ್ರೇಕ್‌ ಪಡೆದಿದ್ದೀರಾ? ಉದ್ಯೋಗ ಕ್ಷೇತ್ರದಲ್ಲಿ ಮತ್ತೆ ಎರಡನೆ ಇನ್ನಿಂಗ್ಸ್‌ ಶುರು ಮಾಡುವ ಇಚ್ಛೆ ನಿಮಗಿದೆಯಾ? ಹಾಗಾದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಅಂಥ ಮಹಿಳೆಯರಿಗಾಗಿಯೇ “ಜಾಬ್ಸ್ ಫಾರ್‌ ಹರ್‌’ ಸಂಸ್ಥೆ ವತಿಯಿಂದ “ರೀಸ್ಟಾರ್ಟ್‌ ಹರ್‌’ ಎಂಬ ಒಂದು ದಿನದ ಉದ್ಯೋಗ ಮೇಳ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಉದ್ಯೋಗದಲ್ಲಿ ಬ್ರೇಕ್‌ ಪಡೆದಿದ್ದ ಮಹಿಳೆಯರಿಗೆ ಮತ್ತೆ ಕೆಲಸಕ್ಕೆ ಸೇರಲು ಸಹಾಯವಾಗುವಂಥ ಕೌಶಲ, ಆತ್ಮವಿಶ್ವಾಸ ಮತ್ತು ಅಗತ್ಯ ಮಾಹಿತಿಗಳನ್ನು ನೀಡುವ ಕಾರ್ಯಾಗಾರ ಇದಾಗಿದೆ. ಅಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ಚರ್ಚೆ, ಸಂವಾದವನ್ನು ಕೂಡ ಏರ್ಪಡಿಸಲಾಗಿದೆ. ಕೆಲಸದ ಅವಕಾಶ ನೀಡುವ ಕಂಪನಿಗಳ ಎಚ್‌.ಆರ್‌.ಗಳ ಮಾಹಿತಿಯನ್ನೂ ಒದಗಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು.

Advertisement

 ಎಲ್ಲಿ?: ಎಂ.ಎಲ್‌.ಆರ್‌ ಕನ್ವೆನÒನ್‌ ಹಾಲ್‌, ಫೀನಿಕ್ಸ್‌ ಮಾರ್ಕೆಟ್‌ ಸಿಟಿ  ಬಳಿ, ವೈಟ್‌ಫೀಲ್ಡ್‌
ಯಾವಾಗ?: ಸೆಪ್ಟೆಂಬರ್‌ 16, ಬೆಳಗ್ಗೆ 8- 5
ಹೆಚ್ಚಿನ ಮಾಹಿತಿಗೆ:  www.jobsforher.com/restarther

Advertisement

Udayavani is now on Telegram. Click here to join our channel and stay updated with the latest news.

Next