ಉಡುಪಿ: ಆನ್‌ಲೈನ್‌ನಲ್ಲಿ ಉದ್ಯೋಗದ ಆಮಿಷಕ್ಕೆ ಬ್ರಹ್ಮಾವರ ಚೇರ್ಕಾಡಿಯ ನಿತಿನ್ ಲಕ್ಷಾಂತರ ರೂ. ವಂಚನೆಗೊಳಗಾಗಿದ್ದಾರೆ.
ಅವರು ಗೂಗಲ್‌ನಲ್ಲಿ ಲವ್ ಲೋಕಲ್ ಎಂಬ ಆನ್‌ಲೈನ್ ಜಾಬ್ ವೆಬ್‌ಸೈಟ್‌ನಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದ್ದರು. ಆ ಸಂಖ್ಯೆ ಬಳಸುತ್ತಿದ್ದ ಅನ್ಸುಲಾ ಗುಪ್ತಾ ಎಂಬ ಅಪರಿಚಿತ ವ್ಯಕ್ತಿ ತಾನು ಮಾತನಾಡಿ ತಾನು ಕಂಪೆನಿಯ ಎಚ್‌ಆರ್ ಎಂದು ಹೇಳಿ ಆನ್ ಲೈನ್ ಜಾಬ್ ನೀಡುವುದಾಗಿ ನಂಬಿಸಿದ್ದರು.
ಡಿ. 15ರಿಂದ ಜ. 6ರ ಮಧ್ಯಾವದಿಯಲ್ಲಿ ಒಟ್ಟು 1,40,744 ರೂ.ಗಳನ್ನು ನಿತಿನ್ ಅವರಿಂದ ಗೋಗಲ್ ಪೇ ಮೂಲಕ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಉದ್ಯೋಗ ನೀಡದೆ, ಪಡೆದ ಹಣವನ್ನು ವಾಪಸು ನೀಡದೇ ಮೋಸ ಮಾಡಿ, ನಷ್ಟ ಉಂಟು ಮಾಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.