Advertisement

ಹೊಸ ಮುಖಗಳಿಗೆ ಭರ್ಜರಿ ಉದ್ಯೋಗ ಅವಕಾಶ

01:39 AM Feb 17, 2021 | Team Udayavani |

ಉದ್ಯೋಗಗಳನ್ನು ಅರಸುತ್ತಿರುವವರಿಗೆ ಶುಭ ಸುದ್ದಿ ಇದೆ. ದೇಶದ ಸುಮಾರು ಶೇ. 15ರಷ್ಟು ಕಂಪೆನಿಗಳು ಎಪ್ರಿಲ್‌ ವೇಳೆಗೆ ಹೊಸಬರನ್ನು ನೇಮಿಸಿಕೊಳ್ಳಲಿದೆ ಎಂದು ಟೀಮ್‌ಲೀಸ್‌ ಸಂಸ್ಥೆ ಹೇಳಿದೆ.

Advertisement

ಲಾಕ್‌ಡೌನ್‌ ಅವಧಿಯಲ್ಲಿ ನೇಮಕ ಮಾಡಿಕೊಂಡಿದ್ದ ಸಂಸ್ಥೆಗಳ ಪ್ರಮಾಣಕ್ಕಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ. ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿರುವುದು ಅದರ ಸೂಚನೆ ಯಾಗಿದೆ. ಸಮೀಕ್ಷೆಯ ಪ್ರಕಾರ ಶೇ. 38ರಷ್ಟು ಕಂಪೆನಿಗಳು ಲಾಕ್‌ಡೌನ್‌ಗೆ ಮೊದಲು ನೇಮಕಾತಿಗೆ ನಿರ್ಧರಿಸಿದ್ದವು.

ಯಾರಿಗೆ ಅವಕಾಶ?
ಸಮೀಕ್ಷೆಯು 18 ಆರ್ಥಿಕ ವಲಯಗಳು ಮತ್ತು 14 ನಗರಗಳಿಂದ 800ಕ್ಕೂ ಹೆಚ್ಚು ಕಂಪೆನಿಗಳನ್ನು ಒಳಗೊಂಡಿದೆ. ವ್ಯಾಪಾರ ಅಭಿವೃದ್ಧಿ (ಬ್ಯುಸಿನೆಸ್‌ ಡೆವಲಪ್‌ಮೆಂಟ್‌) ಅಂದರೆ ಮಾರಾಟ ವೃತ್ತಿಪರರು, ಗ್ರಾಫಿಕ್‌ ಡಿಸೈನರ್‌, ಡಿಜಿಟಲ್‌ ಮಾರ್ಕೆಟಿಂಗ್‌ ಅಸೋಸಿಯೇಟ್‌, ಕಂಟೆಂಟ್‌ ರೈಟರ್‌ ಮತ್ತು ವೆಬ್‌ ಡೆವಲಪರ್‌ಗಳು ಹೆಚ್ಚಿನ ಉದ್ಯೋಗಗಳನ್ನು ಪಡೆಯಲಿದ್ದಾರೆ. ಐಟಿ ಕಂಪೆನಿಗಳು ಅಗ್ರಸ್ಥಾನದಲ್ಲಿವೆ. ಐಟಿ ವಲಯದ ಶೇ. 24ರಷ್ಟು ಕಂಪೆನಿಗಳು 3 ತಿಂಗಳುಗಳಲ್ಲಿ ನೇಮಕ ಮಾಡುವ ಬಗ್ಗೆ ಯೋಚಿಸುತ್ತಿವೆ.

ಶೇ. 21 ಟೆಲಿಕಾಂ ಕಂಪೆನಿಗಳು
ಎಪ್ರಿಲ್‌ ವೇಳೆಗೆ ಟೆಲಿಕಾಂ ಉದ್ಯಮವು ಶೇ. 21ರಷ್ಟು. ಆರಂಭಿಕ ಇ-ಕಾಮರ್ಸ್‌ ಮತ್ತು ತಂತ್ರಜ್ಞಾನ ಕಂಪೆನಿಗಳು ಶೇ. 19ರಷ್ಟು, ಆರೋಗ್ಯ ಮತ್ತು ಔಷಧ ಕಂಪೆನಿ ಗಳು, ಎಫ್ಎಂಸಿಜಿ ಮತ್ತು ಹಣಕಾಸು ಸೇವಾ ಕಂಪೆನಿಗಳೂ ಹೊಸಬರನ್ನು ನೇಮಿಸಿ ಕೊಳ್ಳಲಿವೆ. ಆದರೆ ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಕಡಿಮೆ ನೇಮಕಾತಿ ಇರಲಿದೆ.

ಯಾವ ನಗರಗಳಲ್ಲಿ ಹೆಚ್ಚು
ಬೆಂಗಳೂರಿನಲ್ಲಿ ಅತೀ ಹೆಚ್ಚು ಅಂದರೆ ಶೇ.41ರಷ್ಟು ನೇಮಕಾತಿ ನಡೆಯಲಿದೆ. ಉಳಿದಂತೆ ಮುಂಬಯಿನಲ್ಲಿ ಶೇ. 29, ದಿಲ್ಲಿಯಲ್ಲಿ ಶೇ. 24ರಷ್ಟು ನೇಮಕಾತಿಗಳು ಹೊಸಬರಿಗಾಗಿ ನಡೆಯಲಿವೆ. ಅನಂತರದ ಸ್ಥಾನದಲ್ಲಿ ಚೆನ್ನೆç, ಹೈದರಾಬಾದ್‌ ಮತ್ತು ಪುಣೆಯ ಕಂಪೆನಿಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next