Advertisement
ಈ ಇಲಾಖೆಗಳ ವತಿಯಿಂದ ಡಿಸೆಂಬರ್ ಮಾಸಾದ್ಯಂತ ಸುಶಾಸನ ದಿನ ಆಚರಿಸಿ ಹಲವು ಉಪಯುಕ್ತ ಉಪಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಉನ್ನತ ಶಿಕ್ಷಣ, ಐಟಿ- ಬಿಟಿ, ಕೌಶಲಾಭಿವೃದ್ಧಿ ಇಲಾಖೆಗಳಲ್ಲಿ ಉತ್ತಮ ಆಡಳಿತಕ್ಕೆ ಭದ್ರ ಬುನಾದಿ ಹಾಕಲು “ಸುಶಾಸನ ಮಾಸ: ಸುಂದರ ಸಮಾಜದ ಸಾತ್ವಿಕ ತುಡಿತ’ ಘೋಷವಾಕ್ಯದಡಿ ನಾವು ಡಿ.1ರಂದು ಚಾಲನೆ ನೀಡಿದೆವು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
Related Articles
Advertisement
ಕೆಎಸ್‌ಡಿಸಿಯಿಂದ ಪಾರಂಪರಿಕ ಕೌಶಲಗಳ ಬಲವರ್ಧನೆ, ಸಶಕ್ತೀಕರಣ, ಎನ್‌ಆರ್‌ಎಲ್‌ಎಂ ಅಡಿಯಲ್ಲಿ ಮಾಹಿತಿ ಮತ್ತು ಹಣಕಾಸು ನಿರ್ವಹಣೆಗೆ ಲೋಕೋಸ್ ತಂತ್ರಾಂಶ, ಲಿಂಗಾಧಾರಿತ ತಾರತಮ್ಯ ಮತ್ತು ಮಹಿಳಾ ದೌರ್ಜನ್ಯ ಕುರಿತು ಅರಿವು ಮೂಡಿಸಲು ರಾಜ್ಯದ ಎಲ್ಲ 227 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ. ಪ್ರಧಾನಮಂತ್ರಿಗಳ ಆಹಾರ ಕಿರು ಸಂಸ್ಕರಣ ಯೋಜನೆಯಡಿ 2,623 ಫಲಾನುಭವಿಗಳಿಗೆ 10.13 ಕೋಟಿ ರೂ. ಸಹಾಯಧನ ವಿತರಣೆ, ಕ್ಷೀರ ಸಂಜೀವಿನಿ ಯೋಜನೆಗಳಿಗೆ ಚಾಲನೆ, ಮುದ್ರಾ ಸಾಲ ಪಡೆಯುವ ಬಗ್ಗೆ ವಿಡಿಯೋ ಸಂವಾದ, ಕೃಷಿ ಸಖೀಯರಿಗೆ ತರಬೇಟಿ ಎಲ್ಲವನ್ನೂ ವ್ಯವಸ್ಥಿತಿವಾಗಿ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.
ಜಗತ್ತಿಗೆ ಭಾರತದ ಶಕ್ತಿ ತೋರಿಸಿಕೊಟ್ಟವರು ವಾಜಪೇಯಿ
ಸ್ವತಂತ್ರ ಭಾರತದ ಇತಿಹಾಸದಲ್ಲಿ ದಕ್ಷ, ಪಾರದರ್ಶಕ ಮತ್ತು ನಿಷ್ಕಳಂಕ ಆಡಳಿತದ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲವು ಎಂಬುದನ್ನು ತೋರಿಸಿಕೊಟ್ಟವರು ಅಟಲ್ ಬಿಹಾರಿ ವಾಜಪೇಯಿ. ಎನ್‌ಡಿಎ ಮೈತ್ರಿಕೂಟವನ್ನು ಐದು ವರ್ಷಗಳ ಕಾಲ ತಮ್ಮ ರಾಜಕೀಯ ದಾರ್ಶನಿಕತೆ ಮತ್ತು ಮೇರು ವ್ಯಕ್ತಿತ್ವ ಬಲದಿಂದ ಮುನ್ನಡೆಸಿದವರು. ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಇಡೀ ಜಗತ್ತಿಗೆ ಭಾರತದ ಶಕ್ತಿ ತೋರಿಸಿಕೊಟ್ಟವರು. ಅವರ ಹುಟ್ಟುಹಬ್ಬವನ್ನು ಸುಶಾಸನ ದಿನವನ್ನಾಗಿ ಆಚರಿಸುತ್ತಿರುವುದು ಸೂಕ್ತ ಎಂದು ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.