Advertisement
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಷಡ್ಯಂತ್ರಕ್ಕೆ ಬಲಿಯಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಮನೆಯವರಿಗೆ ನಾನು ನನ್ನ ಕಚೇರಿಯಲ್ಲಿ ಕೆಲಸ ಕೊಡುವ ಆಜ್ಞೆ ಮಾಡುತ್ತೇನೆ ಎಂದರು.
Related Articles
Advertisement
ನಾವು ದೊಡ್ಡಬಳ್ಳಾಪುರದಿಂದ ಜನಸ್ಪಂದನ ಯಾತ್ರೆಯನ್ನು ರಾಜ್ಯಾದ್ಯಂತ ನಡೆಸುತ್ತೇವೆ. ತಾಕತ್ ಇದ್ದರೆ ನಮ್ಮ ಯಾತ್ರೆಯನ್ನು ನಿಲ್ಲಿಸಿ, ನಿಮ್ಮ ಮಾತಿನಿಂದಲ್ಲ ಎಂದು ಕಾಂಗ್ರೆಸ್ ಗೆ ಸವಾಲೆಸೆದರು.
ಇದು ಪ್ರಜಾಪ್ರಭುತ್ವ. ಇಲ್ಲಿ ಜನರು ನಿರ್ಧಾರ ಮಾಡುತ್ತಾರೆ. ರಾಜ್ಯದಲ್ಲಿ ಪ್ರತಿ ಗ್ರಾಮಗಳಿಗೆ ಜನಸ್ಪಂದನ ಯಾತ್ರೆ ನಡೆಸುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಮ್ಮ ಸಾಧನೆಗಳ ರಿಪೋರ್ಟ್ ಕಾರ್ಡ್ ತೋರಿಸಿ ನಿಮ್ಮ ಮುಂದೆ ಬಂದು ನಿಲ್ಲುತ್ತೇವೆ. ಆಶೀರ್ವಾದ ಮಾಡಿ. ಈ ಜನಸ್ಪಂದನ ವಿಜಯೋತ್ಸವವನ್ನಾಗಿ ಮಾಡುತ್ತೇವೆ. ನನ್ನ ಅದಮ್ಯ ಶಕ್ತಿಯನ್ನು ಇಮ್ಮಡಿಗೊಳಿಸಿ ಪಕ್ಷ ಅಧಿಕಾರಕ್ಕೆ ತರಲು ಹೊರಡುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
Koo Appಮತಾಂಧರಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕುಟುಂಬದವರಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ತನ್ನ ಕಚೇರಿಯಲ್ಲೇ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ನೊಂದ ಕುಟುಂಬದ ಕಣ್ಣೀರು ಒರೆಸುವುದಲ್ಲದೆ ಅವರ ಕುಟುಂಬದವರ ಭವಿಷ್ಯದ ಭದ್ರತೆಯನ್ನು ಖಾತರಿಗೊಳಿಸುವುದೇ ಬಿಜೆಪಿಯ ಜನಸ್ಪಂದನ. #JanaSpandana – BJP KARNATAKA (@BJP4Karnataka) 10 Sep 2022