ವಾರಾಣಸಿ: ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚೆಗೆ ನಡೆದ ಸರ್ವೇ ವೇಳೆ ಶಿವಲಿಂಗ ಪತ್ತೆಯಾದ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ, “ಆಜ್ ತಕ್’ ಹಾಗೂ “ಇಂಡಿಯಾ ಟುಡೇ’ ವಾಹಿನಿಗಳು, ಕೋರ್ಟ್ ಕಮೀಷನ್ ಸರ್ವೇ ನಡೆಸಿದ ಜ್ಞಾನವಾಪಿ ಮಸೀದಿಯ ಕೆಳಮಹಡಿಯಲ್ಲಿರುವ ಕೋಣೆಯ ಫೋಟೋಗಳು ಹಾಗೂ ಮಸೀದಿಯ ಸರ್ವೇ ನಕ್ಷೆಗಳನ್ನು ಪ್ರಕಟಿಸಿವೆ.
ಈ ಕೋಣೆಯು ಮಸೀದಿಯ ಶೃಂಗಾರ್ ಕಾಂಪ್ಲೆಕ್ಸ್‌ನ ಕೆಳಭಾಗದಲ್ಲಿದೆ. ಪ್ರತೀ ವರ್ಷ, ಜ್ಞಾನವಾಪಿ ಮಸೀದಿ ಆವರಣದಲ್ಲಿ “ಶ್ರೀ ರಾಮಚರಿತ ಮಾನಸ ವಾಚನ ಪಾಠ ಮಹಾಯಜ್ಞ ಸಮಿತಿ’ ವತಿಯಿಂದ, “ರಾಮಚರಿತ ಮಾನಸ’ ಪಠನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಆ ಸಂದರ್ಭದಲ್ಲಿ ಬಿದಿರು ಬೊಂಬು, ಶೀಟ್‌ಗಳಿಂದ ಟೆಂಟ್‌ಗಳನ್ನು ನಿರ್ಮಿಸಲಾಗುತ್ತದೆ.
ಕಾರ್ಯಕ್ರಮ ಮುಗಿದ ಅನಂತರ ಬೊಂಬುಗಳು, ಶೀಟ್‌ಗಳನ್ನು ಹಾಗೂ ಇನ್ನಿತರ ಸಾಮಗ್ರಿಗಳನ್ನು ಇದೇ ಕೊಠಡಿಯಲ್ಲಿ ಇಡಲಾಗುತ್ತದೆ ಎಂದು ಫೋಟೋ ಸಹಿತ ವಿವರಿಸಲಾಗಿದೆ.
ಸದ್ಯ ಪ್ರಕರಣದ ವಿಚಾರಣೆಯನ್ನು ವಾರಾಣಸಿಯ ಜಿಲ್ಲಾ ಕೋರ್ಟ್‌ನ ಅನುಭವಿ ಜಡ್ಜ್ ನಡೆಸಬೇಕು ಎಂಬ ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
Related Articles
ಇದನ್ನೂ ಓದಿ : ಸೋತ ಡೆಲ್ಲಿ ಕ್ಯಾಪಿಟಲ್ಸ್, ಪ್ಲೇಆಫ್ ಗೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು