ಜಮ್ಮು-ಕಾಶ್ಮೀರ: 1990ರಲ್ಲಿ ಭಾರತೀಯ ವಾಯುಪಡೆ ಅಧಿಕಾರಿಯನ್ನು ಹತ್ಯೆಗೈದ ಆರೋಪದಲ್ಲಿ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್ ಎಫ್)ನ ಮಾಜಿ ಕಮಾಂಡರ್ ಜಾವೇದ್ ಮೀರ್ ನನ್ನು ಬಂಧಿಸಲಾಗಿದೆ ಎಂದು ಸಿಬಿಐ ಶುಕ್ರವಾರ ತಿಳಿಸಿದೆ.
ಬಂಧಿತ ಜಾವೇದ್ ನನ್ನು ಮುಂದಿನ ವಾರ ಅಕ್ಟೋಬರ್ 23ರಂದು ಕೋರ್ಟ್ ಗೆ ಹಾಜರುಪಡಿಸುವುದಾಗಿ ವರದಿ ವಿವರಿಸಿದೆ.
ಬಂಧಿತ ಜಾವೇದ್ ನನ್ನು ಮುಂದಿನ ವಾರ ಅಕ್ಟೋಬರ್ 23ರಂದು ಕೋರ್ಟ್ ಗೆ ಹಾಜರುಪಡಿಸುವುದಾಗಿ ವರದಿ ವಿವರಿಸಿದೆ. ಈ ಪ್ರಕರಣವನ್ನು ವರ್ಗಾಯಿಸುವಂತೆ ಜಮ್ಮು-ಕಾಶ್ಮೀರ ಹೈಕೋರ್ಟ್ ಗೆ ಸಿಬಿಐ ಮನವಿ ಮಾಡಿಕೊಂಡಿತ್ತು. ಮಾರ್ಚ್ ನಲ್ಲಿ ಪ್ರಕರಣ ದೆಹಲಿಗೆ ವರ್ಗಾವಣೆಯಾಗಿತ್ತು.
ಟೆರರ್ ಫಂಡಿಂಗ್ ಪ್ರಕರಣದಲ್ಲಿಯೂ ಜೆಕೆಎಲ್ ಎಫ್ ಕಮಾಂಡರ್ ಯಾಸಿನ್ ಮಲಿಕ್ ಜತೆಗೆ ಮೀರ್ ಕೂಡಾ ಆರೋಪಿಯಾಗಿರುವುದಾಗಿ ವರದಿ ತಿಳಿಸಿದೆ. 1990ರ ಜನವರಿ 25ರಂದು ನಿಷೇಧಿತ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ ನ ಮೀರ್ ಹಾಗೂ ಮಲಿಕ್ ಐಎಎಫ್ ಅಧಿಕಾರಿಯನ್ನು ಕೊಂದ ಪ್ರಕರಣದಲ್ಲಿ ಶಾಮೀಲಾಗಿದ್ದರು.
ಶ್ರೀನಗರದ ರಾವಲ್ಪೋರಾ ಪ್ರದೇಶದಲ್ಲಿ ಐಎಎಫ್ ನ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರನ್ನು ಜೆಕೆಎಲ್ ಎಫ್ ಉಗ್ರರು ಹತ್ಯೆಗೈದಿದ್ದರು. ಆರೋಪಪಟ್ಟಿಯಲ್ಲಿ ಸಿಬಿಐ ಮಲಿಕ್ ಹೆಸರನ್ನು ದಾಖಲಿಸಿತ್ತು. ಟೆರರ್ ಫಂಡಿಂಗ್ ಪ್ರಕರಣದಲ್ಲಿ ಎನ್ ಐಎ ಈಗಾಗಲೇ ಮಲಿಕ್ ನನ್ನು ಬಂಧಿಸಿದ್ದು, ಸದ್ಯ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವುದಾಗಿ ವರದಿ ತಿಳಿಸಿದೆ.