ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಜಮ್ಮು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಗಡಿ ನುಸುಳಿ ಒಳ ಬರಲು ಪ್ರಯತ್ನಿಸಿದ್ದ
ಒಂಬತ್ತು ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ ಎಂದು ವರದಿ ತಿಳಿಸಿದೆ.
Advertisement
ಅಮಾಯಕ ನಾಗರಿಕರನ್ನು ಹತ್ಯೆಗೈದ ಘಟನೆಯಲ್ಲಿ ಶಾಮೀಲಾಗಿದ್ದ ನಾಲ್ವರು ಉಗ್ರರನ್ನು ದಕ್ಷಿಣ ಕಾಶ್ಮೀರದ ಬಾಟ್ಪುರಾ ಪ್ರದೇಶದಲ್ಲಿಶನಿವಾರ ಹತ್ಯೆಗೈಯಲಾಗಿತ್ತು.
ಉಗ್ರರನ್ನು ಉತ್ತರ ಕಾಶ್ಮೀರದಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ವರದಿ ವಿವರಿಸಿದೆ. ಉಗ್ರರು ಮತ್ತು ಸೇನಾ ಪಡೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಯೋಧ ಹುತಾತ್ಮನಾಗಿದ್ದು, ಇಬ್ಬರು ಗಂಭೀರವಾಗಿ
ಗಾಯಗೊಂಡಿದ್ದರು. ಗಡಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತ ಹಾಗೂ ವಿಪರೀತ ಶೀತ ಗಾಳಿಯಿಂದಾಗಿ ಕಾರ್ಯಾಚರಣೆ
ನಡೆಸುವುದು ಕಠಿಣವಾಗಿದೆ. ಆದರೂ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿದೆ.