Advertisement

ಸುಳ್ಳು ಸುದ್ದಿ ಹಬ್ಬಿಸಬೇಡಿ, ಜಮ್ಮು,ಕಾಶ್ಮೀರಕ್ಕೆ ಬನ್ನಿ; ರಾಹುಲ್ ಗೆ ಗವರ್ನರ್ ಆಹ್ವಾನ

12:17 PM Aug 15, 2019 | Nagendra Trasi |

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸುಳ್ಳು ಸುದ್ದಿಯನ್ನೇ ಹರಡುತ್ತಿದ್ದಾರೆ. ಹೀಗಾಗಿ ಕಣಿವೆ ರಾಜ್ಯದಲ್ಲಿನ ನಿಜವಾದ ಪರಿಸ್ಥಿತಿ ಏನೆಂಬುದನ್ನು ತಿಳಿಯಲು ರಾಹುಲ್ ಗಾಂಧಿ ಜಮ್ಮು-ಕಾಶ್ಮೀರಕ್ಕೆ ಬರಲಿ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಆಹ್ವಾನ ನೀಡಿದ್ದರು. ಏತನ್ಮಧ್ಯೆ ಜಮ್ಮು-ಕಾಶ್ಮೀರ ಗವರ್ನರ್ ಆಹ್ವಾನ ಇದೀಗ ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ.

Advertisement

ಏತನ್ಮಧ್ಯೆ ರಾಜ್ಯಪಾಲ ಮಲಿಕ್ ಆಹ್ವಾನವನ್ನು ರಾಹುಲ್ ಗಾಂಧಿ ಸ್ವೀಕರಿಸಿದ್ದು, ತಾನು ಕಣಿವೆ ರಾಜ್ಯಕ್ಕೆ ಭೇಟಿ ನೀಡುತ್ತೇನೆ. ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವ ಸ್ವಾತಂತ್ರ್ಯವನ್ನು ರಾಜ್ಯಪಾಲರು ನೀಡಿರುವುದು ಸ್ವಾಗತ ಎಂದು ಹೇಳಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಿರುವ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಆಹ್ವಾನ ಪ್ರಾಮಾಣಿಕತೆಯಿಂದ ಕೂಡಿಲ್ಲ, ಇದೊಂದು ಪ್ರಚಾರದ ವ್ಯೂಹವಾಗಿದೆ ಎಂದು ಪಿ.ಚಿದಂಬರಂ ತಿರುಗೇಟು ನೀಡಿದ್ದಾರೆ.

ಮತ್ತೊಂದೆದೆ ವಿರೋಧ ಪಕ್ಷಗಳ ನಾಯಕರ ನಿಯೋಗ, ಡಿಯರ್ ಗವರ್ನರ್ ಮಲಿಕ್, ನಮಗೂ ಕೂಡಾ ಜಮ್ಮು-ಕಾಶ್ಮೀರ, ಲಡಾಖ್ ಗೆ ಭೇಟಿ ಕೊಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next