ಕಾಶ್ಮೀರ : ಲೇತ್‌ಪೋರಾ ಸಿಆರ್‌ಪಿಎಫ್ ಕ್ಯಾಂಪ್ ನಲ್ಲಿನ ಅವಶೇಷಗಳೆಡೆಯಿಂದ ಮೂರನೇ ಜೈಶ್ ಎ ಮೊಹಮ್ಮದ್ (ಜೆಇಎಂ) ಉಗ್ರನ ಶವವನ್ನು ಹೊರತೆಗೆಯುವುದರೊಂದಿಗೆ ಭದ್ರತಾ ಪಡೆಗಳು ಎರಡು ದಿನಗಳ ಉಗ್ರರ ಶೋಧ ಕಾರ್ಯಾಚರಣೆಯನ್ನು ಕೊನೆಗೊಳಿಸಿದ್ದಾರೆ. ಜೆಇಎಂ ಉಗ್ರನ ಶವವನನ್ನು ಇನ್ನಷ್ಟೇ ಗುರತಿಸಬೇಕಾಗಿದೆ.
ನಿನ್ನೆ ಭಾನುವಾರ ನಸುಕಿನ ವೇಳೆ ಲೇತ್‌ಪೋರಾ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ನಡೆದಿದ್ದ ಜೆಇಎಂ ಉಗ್ರರ ದಾಳಿಯಲ್ಲಿ ಐವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇತರ ಮೂವರು ಗಾಯಗೊಂಡಿದ್ದರು.
ಶಿಬಿರದ ಮೇಲೆ ಭಾರೀ ಶಸ್ತ್ರ ಸಜ್ಜಿತ ಉಗ್ರರು ದಾಳಿ ನಡೆಸಿದುದನ್ನು ಅನುಸರಿಸಿ ಆರಂಭಿಸಲಾಗಿದ್ದ ಶೋಧ ಕಾರ್ಯಾಚರಣೆಯನ್ನು ಇಂದು ಸೋಮವಾರ ಮತ್ತೆ ಮುಂದುವರಿಸಲಾಗಿತ್ತು.
ಭಾನುವಾರದ ಕಾರ್ಯಾಚರಣೆಯಲ್ಲಿ ಇಬ್ಬರು ಜೆಇಎಂ ಉಗ್ರರನ್ನು ಹತ್ಯೆಗೈಯಲಾಗಿತ್ತು. ಮೂರನೇ ಉಗ್ರನಿಗಾಗಿ ಶೋಧ ಕಾರ್ಯ ನಡೆದಿತ್ತು. ಶಿಬಿರದ ಮೇಲೆ ದಾಳಿ ನಡೆಸಿದ್ದ ಉಗ್ರರು ಬಳಿಕ ಪರಾರಿಯಾಗಿ ಸಮೀಪದ ಕಟ್ಟಡಗಳಲ್ಲಿ ಅವಿತುಕೊಂಡಿದ್ದರು.
Related Articles
ಹತರಾದ ಉಗ್ರರಲ್ಲಿ ಒಬ್ಟಾತನು ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯಿಂದ ಆರಂಭಿಕ ತನಿಖೆಯಲ್ಲೇ ಗೊತ್ತಾಗಿತ್ತು. ಆತನ ತಂದೆ ಜಮ್ಮು ಕಾಶ್ಮೀರ ಪೊಲೀಸ್ ದಳದಲ್ಲಿ ಸಿಬಂದಿಯಾಗಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕ ಎಸ್ ವಿ ವೈದ್ ಅವರು ಕಾಶ್ಮೀರ ಕಣಿವೆಯಲ್ಲಿ ಉಗ್ರರ ಸಂಭಾವ್ಯ ದಾಳಿ ನಡೆಯಲಿದೆ ಎಂಬುದನ್ನು ಮೂರು ದಿನಗಳ ಹಿಂದೆಯೇ ಅಂದಾಜಿಸಲಾಗಿತ್ತು.
ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರೆಂದರೆ ಇನ್ಸ್‌ಪೆಕ್ಟರ ಕುಲ್‌ದೀಪ್ ರಾಯ್ (ಹಮೀರ್‌ಪುರ, ಹಿಮಾಚಲ ಪ್ರದೇಶ), ಹೆಡ್ ಕಾನ್‌ಸ್ಟೆಬಲ್ ಅಹ್ಮದ್, ರಾಜೌರಿ, ಜಮ್ಮು ಕಾಶ್ಮೀರ, ಕಾನ್‌ಸ್ಟೆಬಲ್ ಶರೀಫ್ ಉದ್ ದಿನ್ ಗನಾಜೆ, ಛದೂರಾ, ಬಡಗಾಂವ್, ಜಮ್ಮು ಕಾಶ್ಮೀರ, ರಾಜೇಂದ್ರ ನಯೀನ್, ಚುರು, ರಾಜಸ್ಥಾನ, ಪಿ. ಕೆ ಪಂಡಾ, ಸುಂದರಗಢ, ಒಡಿಶಾ. ಇವರ ಪೈಕಿ ಕುಲ್‌ದೀಪ್ ರಾಯ್ ಅವರ ಗುಂಡಿನ ಕಾಳಗದ ವೇಳೆ ಹೃದಯಾಘಾತದಿಂದ ಮಡಿದಿದ್ದರು. ಇತರ ನಾಲ್ವರು ಗುಂಡೇಟಿಗೆ ಬಲಿಯಾಗಿದ್ದರು.