Advertisement
ಬಿಜೆಪಿಯ ಸಾವಿರಾರು ಕಾರ್ಯಕರ್ತರು ಮತ್ತು ಅದರ ಮೋರ್ಚಾಗಳು ಫಲಕಗಳನ್ನು ಹಿಡಿದು ಬ್ಯಾನರ್ಜಿ ಮತ್ತು ಅವರ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು.
Related Articles
Advertisement
ಇನ್ನು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು, “ಟಿಎಂಸಿ ಗೂಂಡಾಗಳು ಮಹಿಳೆಯರನ್ನು ಸಹ ಬಿಡಲಿಲ್ಲ”, ಇದು ಪ್ರಜಾಪ್ರಭುತ್ವದ “ಕಗ್ಗೊಲೆ” ಎಂದು ಆರೋಪಿಸಿದರು.
ಟಿಎಂಸಿ ಇಂತಹ ಕೃತ್ಯವೆಸಗುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾನದ ನಂತರದ ಹಿಂಸಾಚಾರದಲ್ಲಿ ಕನಿಷ್ಠ 14 ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು ಒಂದು ಲಕ್ಷ ಜನರು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಭಾರತದ ವಿಭಜನೆಯ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದಿದ್ದವು ಎಂದು ಕೇಳಿದ್ದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಮ್ಮ ಪಕ್ಷ ಇಂತಹ ಚಟುವಟಿಕೆಗೆ ಬೆಂಬಲಸುವುದಿಲ್ಲ. ನಮ್ಮ ಆಧ್ಯತೆ ಇದಲ್ಲ. ರಾಜ್ಯದ ಅಭಿವೃದ್ಧಿ ನಮಗೆ ಮುಖ್ಯ. ಕಾನೂನು ಸುವ್ಯವಸ್ಥೆಯನ್ನು ರಾಜ್ಯದಲ್ಲಿ ಬಿಗಿಯಾಗಿ ಜಾರಿಗೊಳಿಸುತ್ತೇನೆ. ಬಿಜೆಪಿ ಗೆಲುವು ಪಡೆದ ಕ್ಷೇತ್ರಗಳಲ್ಲಿ ಹೆಚ್ಚು ಗಲಭೆ-ಗಲಾಟೆಗಳು ನಡೆಯುತ್ತಿವೆ. ಹಳೆ ವಿಡಿಯೋಗಳ ಮೂಲಕ ಸುಳ್ಳು ಸುದ್ದಿಗಳನ್ನು ಬಿಜೆಪಿ ಪಕ್ಷ ಹರಡುತ್ತಿದೆ. ಇಂತಹ ಕೃತ್ಯವನ್ನು ನಿಲ್ಲಿಸುವಂತೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಇನ್ನು, ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆಯ ಫಲಿತಾಂಶದ ದಿನದಿಂದ ಆರಂಭವಾದ ಹಿಂಸಾಚಾರ ಮಂಗಳವಾರವೂ ಮುಂದುವರಿ ದಿದ್ದು, ಮೃತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಓದಿ : ಕ್ಷೇತ್ರವಾರು ಸಹಾಯವಾಣಿ-ಆಂಬ್ಯುಲೆನ್ಸ್ ಸೇವೆ ! ಕೋವಿಡ್ ಸಂಕಷ್ಟಕ್ಕೆ ಕಾಂಗ್ರೆಸ್ ಸ್ಪಂದನೆ!