ಪಾಟ್ನಾ: ಬಿಹಾರ ರಾಜ್ಯದಲ್ಲಿರುವ ಮದ್ಯ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಒತ್ತಾಯಿಸಿದ್ದಾರೆ.
ಮದ್ಯ ನಿಷೇಧದಿಂದ ವಿದೇಶಿ ಪ್ರವಾಸಿಗರ ಆಗಮನ ಮತ್ತು ವಿದೇಶಿ ವಿನಿಮಯ ಗಳಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿ ನಿಷೇಧವನ್ನು ತೆಗೆದುಹಾಕುವಂತೆ ಸೂಚಿಸಿದರು.
ಬೋಧಗಯಾದಲ್ಲಿ ಬುಧ ಮಹೋತ್ಸವದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಂಝಿ, ಮದ್ಯ ನಿಷೇಧದಿಂದಾಗಿ ಬಿಹಾರವು ಅಪಾರ ಪ್ರಮಾಣದ ವಿದೇಶಿ ವಿನಿಮಯ ಗಳಿಕೆಯನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
“ಇದು ಅಂತರಾಷ್ಟ್ರೀಯ ಪ್ರವಾಸಿ ಸ್ಥಳವಾಗಿದ್ದರೂ, ವಿದೇಶಿಗರು ಬೋಧಗಯಾದಲ್ಲಿ 2-3 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಳೆಯುವುದಿಲ್ಲ. ವಿದೇಶಿ ಪ್ರವಾಸಿಗರು ಬೋಧಗಯಾ ಮತ್ತು ಗಯಾಕ್ಕೆ ಬರುತ್ತಾರೆ, ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಉತ್ತರ ಪ್ರದೇಶದ ವಾರಣಾಸಿ ಅಥವಾ ಜಾರ್ಖಂಡ್‌ನ ಹಜಾರಿಬಾಗ್ ಗೆ ಹಿಂತಿರುಗುತ್ತಾರೆ” ಎಂದು ಮಾಂಝಿ ಹೇಳಿದರು.
Related Articles
ಇದನ್ನೂ ಓದಿ:ಸ್ಯಾಂಡಲ್ ವುಡ್ ಹಿರಿಯ ನಟ ಮಂದೀಪ್ ರಾಯ್ ಇನ್ನಿಲ್ಲ
“ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಪುನರಾರಂಭಿಸುವಂತೆ ನಾನು ತೇಜಸ್ವಿ ಅವರನ್ನು ವಿನಂತಿಸುತ್ತೇನೆ. ವಿದೇಶಿ ಪ್ರವಾಸಿಗರು ಇಲ್ಲಿ ಹೆಚ್ಚು ಕಾಲ ಉಳಿಯಲು ಮತ್ತು ಹೆಚ್ಚು ಕಳೆಯಲು ನಾವು ಬಯಸಿದರೆ, ಅವರ ಊಟ ಮತ್ತು ಪಾನೀಯವನ್ನು ನೋಡಿಕೊಳ್ಳಬೇಕು. ಮದ್ಯವನ್ನು ಪುನರಾರಂಭಿಸಿದರೆ, ಅವರ ಆಗಮನವು ಖಂಡಿತವಾಗಿಯೂ ಹತ್ತು ಪಟ್ಟು ಹೆಚ್ಚಾಗುತ್ತದೆ” ಎಂದು ಮಾಂಝಿ ಹೇಳಿದರು.
ಬಿಹಾರದಲ್ಲಿ ಮದ್ಯ ನಿಷೇಧವು ಕಳ್ಳಭಟ್ಟಿ ದುರಂತಗಳಿಗೆ ಕಾರಣವಾಗಿದೆ. ಇತ್ತೀಚಿನ ದುರಂತದಲ್ಲಿ ಜನವರಿ 22 ರಂದು ಸಿವಾನ್ ನಲ್ಲಿ ಸಂಭವಿಸಿದೆ. ಇದರಲ್ಲಿ ಇದುವರೆಗೆ 15 ಜನರು ಪ್ರಾಣ ಕಳೆದುಕೊಂಡಿದ್ದಾರೆ.