ಮೈಸೂರು: ರಿಲಯನ್ಸ್ ಜಿಯೋ ಇಂದು ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿತು.
ಇದಲ್ಲದೇ ದೇಶದ ಇತರ ಪ್ರಮುಖ ನಗರಗಳಾದ ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಕೂಡ ತನ್ನ ಟ್ರೂ 5ಜಿ ಸೇವೆಗಳನ್ನು ಆರಂಭಿಸಿತು.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.
ಇಂದಿನಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಮೈಸೂರಿನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ.
Related Articles
ಇದನ್ನೂ ಓದಿ:ಮುಂಬಯಿ ಯಾರಪ್ಪನದ್ದೂ ಅಲ್ಲ, ಮಹಾರಾಷ್ಟ್ರದ್ದು…; ಫಡ್ನವಿಸ್ ಕಿಡಿ
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು,ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.
“ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಮೋಘ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತಾರೆ ಎಂದರು.
“ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ” ಎಂದು ಅವರು ಹೇಳಿದರು.