Advertisement

ಮೊದಲ ಬ್ಯಾಚ್‌ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಜಿಯೋ ಇನ್‌ಸ್ಟಿಟ್ಯೂಟ್‌

10:12 PM Jul 20, 2022 | Team Udayavani |

ಮುಂಬೈ: ಜಿಯೋ ಇನ್‌ಸ್ಟಿಟ್ಯೂಟ್‌ ತನ್ನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳನ್ನು ಇಂದು ನಡೆದ ಕಾರ್ಯಕ್ರಮದಲ್ಲಿ ಸ್ವಾಗತಿಸಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅವರ ಪಾಲಕರು, ಜಿಯೋ ಇನ್‌ಸ್ಟಿಟ್ಯೂಟ್‌ನ ಸಿಬ್ಬಂದಿ, ರಿಲಾಯನ್ಸ್‌ ಕುಟುಂಬದ ಸದಸ್ಯರು ಹಾಗೂ ಉದ್ಯಮ ಮತ್ತು ಶಿಕ್ಷಣ ವಲಯದ ಮುಖ್ಯಸ್ಥರು ಭಾಗವಹಿಸಿದ್ದರು. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಡಿಜಿಟಲ್‌ ಮೀಡಿಯಾ ಮತ್ತು ಮಾರ್ಕೆಟಿಂಗ್‌ ಸಂಹನಗಳಲ್ಲಿ ಒಟ್ಟು ಎರಡು ಸ್ನಾತಕೋತ್ತರ ಪದವಿಯನ್ನು ಜಿಯೋ ಇನ್‌ಸ್ಟಿಟ್ಯೂಟ್‌ ಆರಂಭಿಸುತ್ತಿದೆ. ತರಗತಿಗಳು ಜುಲೈ 21 ರಿಂದ ಆರಂಭವಾಗಲಿದೆ.

Advertisement

ಜಿಯೋ ಇನ್‌ಸ್ಟಿಟ್ಯೂಟ್‌ನ ಮೊದಲ ಸ್ನಾತಕೋತ್ತರ ಪದವಿಯ ಬ್ಯಾಚ್‌ನಲ್ಲಿ ವಿವಿಧ ಪ್ರದೇಶಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿದ್ದಾರೆ. 19 ರಾಜ್ಯಗಳು ಮತ್ತು ದಕ್ಷಿಣ ಆಫ್ರಿಕಾ, ಭೂತಾನ್‌, ನೇಪಾಳ ಮತ್ತು ಘಾನಾ ದೇಶದ ವಿದ್ಯಾರ್ಥಿಗಳು ಮೊದಲ ಬ್ಯಾಚ್‌ನಲ್ಲಿದ್ದಾರೆ. ಇಂಜಿನಿಯರಿಂಗ್‌, ವಿಜ್ಞಾನ, ಕಲೆ, ವಾಣಿಜ್ಯ, ಸಮೂಹ ಮಾಧ್ಯಮ ಮತ್ತು ಮ್ಯಾನೇಜ್‌ಮೆಂಟ್‌ ಸ್ಟಡೀಸ್‌/ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಶನ್‌ ವಿಭಾಗದಿಂದ ಬಂದ ವಿದ್ಯಾರ್ಥಿಗಳೂ ಇದರಲ್ಲಿದ್ದಾರೆ. ಜಾಹೀರಾತು, ಆಟೋಮೋಟಿವ್, ಬ್ಯಾಂಕಿಂಗ್‌, ನಿರ್ಮಾಣ, ಡಿಜಿಟಲ್‌ ಮಾಧ್ಯಮ, ಎಡ್‌ಟೆಕ್, ಫಿನ್‌ಟೆಕ್‌, ಆರೋಗ್ಯ ಸೇವೆ, ಮಾಹಿತಿ ತಂತ್ರಜ್ಞಾನ, ಲಾಜಿಸ್ಟಿಕ್ಸ್‌, ಸಣ್ಣ ಹಣಕಾಸು, ತೈಲ ಮತ್ತು ಅನಿಲ, ಫಾರ್ಮಾ, ಟೆಲಿಕಾಂ, ಸರ್ಕಾರ, ಎನ್‌ಜಿಒ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರಾಸರಿ ಸುಮಾರು 4 ವರ್ಷಗಳವರೆಗೆ ಕೆಲಸ ಮಾಡಿದ ಅನುಭವವನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ.

ಇದನ್ನೂ ಓದಿ : ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ದೆಹಲಿಯಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಿಂದ ಸ್ವಾಗತ

ಎರಡೂ ಕೋರ್ಸ್‌ಗಳನ್ನು ಜಾಗತಿಕ ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ಪರಿಣಿತರು ಮತ್ತು ಪ್ರೊಫೆಸರ್‌ಗಳು ಬೋಧಿಸಲಿದ್ದಾರೆ. ಪ್ರಾಥಮಿಕ ಬೋಧನೆಯ ಜೊತೆಗೆ ಅಗತ್ಯ ಜೀವನ ಕೌಶಲವನ್ನೂ ರೂಪಿಸುವಲ್ಲಿ ಜಿಯೋ ಇನ್‌ಸ್ಟಿಟ್ಯೂಟ್‌ ಗಮನ ಹರಿಸಿದೆ. ವಿದೇಶದಲ್ಲಿ ಅಧ್ಯಯನ ಅವಧಿಯನ್ನೂ ಜಿಯೋ ಇನ್‌ಸ್ಟಿಟ್ಯೂಟ್‌ ಯೋಜಿಸಿದ್ದು, ಜನಪ್ರಿಯ ಜಾಗತಿಕ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ತೆರೆದುಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next