ಮುಂಬೈ: ರಿಲಯನ್ಸ್ ಇನ್ಫ್ರಾಟೆಲ್ ಹೊಂದಿರುವ ಮೊಬೈಲ್ ಟವರ್ ಸೇರಿದಂತೆ ದೂರ ಸಂಪರ್ಕ ಮೂಲ ಸೌಕರ್ಯಗಳನ್ನು ಖರೀದಿ ಮಾಡುವ ನಿಟ್ಟಿನಲ್ಲಿ ರಿಲಯನ್ಸ್ ಪ್ರಾಜೆಕ್ಟ್ಸ್ ಆ್ಯಂಡ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ 3,720 ಕೋಟಿ ರೂ. ಮೊತ್ತವನ್ನು ಎಸ್‌ಬಿಐನಲ್ಲಿ ಠೇವಣಿಯಾಗಿ ಇರಿಸಿದೆ.
Advertisement
ಕಳೆದ ತಿಂಗಳು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಕಂಪನಿಗೆ ಖರೀದಿ ಪ್ರಕ್ರಿಯೆ ಮುಂದುವರಿಸುವ ಬಗ್ಗೆ ಅನುಮೋದನೆ ನೀಡಿತ್ತು. ರಿಲಯನ್ಸ್ ಪ್ರಾಜೆಕ್ಟ್ಸ್ ಜಿಯೋದ ಸಹವರ್ತಿ ಸಂಸ್ಥೆಯಾಗಿದೆ. 2019ರಲ್ಲಿಯೇ ರಿಲಯನ್ಸ್ ಇನ್ಫ್ರಾಟೆಲ್ ಖರೀದಿಸಲು ಮುಕೇಶ್ ಅಂಬಾನಿ ಮುಂದಾಗಿದ್ದರು.