Advertisement

ನೆಕ್ಸಸ್‌ ಮಾಲ್‌ಗಳಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಿರುವ ಜಿಯೋ-ಬಿಪಿ

08:56 PM Jun 22, 2022 | Team Udayavani |

ಮುಂಬೈ : ರಿಲಾಯನ್ಸ್‌ ಮತ್ತು ಬಿಪಿ ಜಂಟಿ ಸಂಸ್ಥೆಯಾಗಿರುವ ಜಿಯೋ-ಬಿಪಿ ಅಡಿಯಲ್ಲಿ ನೆಕ್ಸಸ್‌ ಮಾಲ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ. 13 ನಗರಗಳಲ್ಲಿ ನೆಕ್ಸಸ್‌ನ 17 ಮಾಲ್‌ಗಳು ಇದ್ದು, ಇದರಲ್ಲಿ ಅತ್ಯಾಧುನಿಕ ಚಾರ್ಜಿಂಗ್‌ ಸ್ಟೇಷನ್‌ಗಳು ಮತ್ತು ಬ್ಯಾಟರಿ ಸ್ವ್ಯಾಪಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತದೆ.

Advertisement

ಎಲೆಕ್ಟ್ರಾನಿಕ್ ವಾಹನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಜಿಯೋ-ಬಿಪಿ ಶ್ರಮಿಸುತ್ತಿದೆ. ಕಳೆದ ವರ್ಷ ಭಾರತದಲ್ಲೇ ಎರಡು ಅತಿದೊಡ್ಡ ಇವಿ ಚಾರ್ಜಿಂಗ್‌ ಹಬ್‌ಗಳನ್ನು ಕಂಪನಿ ಸ್ಥಾಪಿಸಿದೆ. ನೆಕ್ಸಸ್‌ ಮಾಲ್‌ಗಳ ಜೊತೆಗಿನ ಈ ಸಹಭಾಗಿತ್ವದ ಅಡಿಯಲ್ಲಿ ದಿನವಿಡೀ ಕೆಲಸ ಮಾಡುವ ಚಾರ್ಜಿಂಗ್‌ ಮೂಲಸೌಕರ್ಯವನ್ನು ಸ್ಥಾಪಿಸಲಾಗುತ್ತದೆ. ಇದು ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಚಾರ್ಜಿಂಗ್‌ ಮತ್ತು ಬ್ಯಾಟರಿ ಸ್ವ್ಯಾಪಿಂಗ್‌ ವ್ಯವಸ್ಥೆ ಇರಲಿದೆ. ಮೊದಲ ಹಂತದಲ್ಲಿ, ನವಿ ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್‌ನಲ್ಲಿರುವ ನೆಕ್ಸಸ್‌ ಮಾಲ್‌ಗಳಲ್ಲಿ ಜೂನ್ 2022 ರಿಂದ ಚಾರ್ಜಿಂಗ್‌ ಸ್ಟೇಷನ್‌ಗಳು ಲಭ್ಯವಾಗಿರಲಿವೆ.

ಇದನ್ನೂ ಓದಿ : ದುಬೈ: ಯೋಗಾದಲ್ಲಿ ಗಿನ್ನೆಸ್‌ ರೆಕಾರ್ಡ್‌ ಬರೆದ ಭಾರತೀಯ ಯೋಗ ಟೀಚರ್‌

ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಜನರು ಬಳಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ತಮ್ಮ ಮಾಲ್‌ಗಳಲ್ಲಿ ವಾಹನಗಳನ್ನು ಚಾರ್ಜ್‌ ಮಾಡಿಸಿಕೊಳ್ಳುವಂತೆ ತಮ್ಮ ಗ್ರಾಹಕರಿಗೆ ನೆಕ್ಸಸ್‌ ಪ್ರೋತ್ಸಾಹಿಸಲಿದೆ. 13 ನಗರಗಳಲ್ಲಿ 17 ಮಾಲ್‌ಗಳನ್ನು ಹೊಂದಿರುವ ನೆಕ್ಸಸ್‌ ಮಾಲ್‌ಗಳು ಸದ್ಯ ದೇಶದ ಅತಿದೊಡ್ಡ ಮಾಲ್‌ಗಳಲ್ಲಿ ಒಂದಾಗಿದೆ. ಇದು ಈಗಾಗಲೇ 100% ವಹಿವಾಟು ಚೇತರಿಕೆಯನ್ನು ಗಳಿಸಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ನೆಕ್ಸಸ್‌ ಮಾಲ್‌ಗಳು ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಇದರಿಂದಾಗಿ ಮಾಲ್‌ಗಳಲ್ಲಿ ವಹಿವಾಟು ಅತ್ಯಂತ ಬೇಗ ಚೇತರಿಸಿಕೊಂಡಿದೆ.

ಜಿಯೋ-ಬಿಪಿ ಪಲ್ಸ್‌ ಅಡಿಯಲ್ಲಿ ಭಾರತೀಯ ಗ್ರಾಹಕರಿಗೆ ಚಾರ್ಜಿಂಗ್‌ ಮೂಲಸೌಕರ್ಯವನ್ನು ಜಿಯೋ-ಬಿಪಿ ಜಂಟಿ ಸಂಸ್ಥೆಯು ಒದಗಿಸುತ್ತಿದೆ. ಜಿಯೋ-ಬಿಪಿ ಪಲ್ಸ್‌ ಮೊಬೈಲ್‌ ಆಪ್‌ ಬಳಸಿಕೊಂಡು ಗ್ರಾಹಕರು ತಮ್ಮ ಸಮೀಪದಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಹುಡುಕಬಹುದು ಮತ್ತು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ಚಾರ್ಜ್‌ ಮಾಡಿಕೊಳ್ಳಬಹುದು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next