ಕೊರಟಗೆರೆ: ಜಿಲ್ಲಾಡಳಿತ ತುಮಕೂರು ತಾಲ್ಲೂಕು ಆಡಳಿತ ಕೊರಟಗೆರೆಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಾಲ್ಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಮಾತನಾಡಿ, ಕರ್ನಾಟಕ ಸರ್ಕಾರದ ಆದೇಶದಂತೆ ಕೊಳಾಲ ಹೋಬಳಿಯ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ, ಗ್ರಾಮಗಳಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಪರಿಹಾರವನ್ನು ಕೊಡಿಸುವಂತ ಕಾರ್ಯ ನಡೆಯುತ್ತಿದೆ. ಪಿಂಚಣಿ ಅದಾಲತ್ ಮೂಲಕ ವಿಶೇಷ ಚೇತನರಿಗೆ ವೃದ್ಧರಿಗೆ, ರೈತರ ಕುಟುಂಬಗಳಿಗೆ ಕೃಷಿ ಇಲಾಖೆ ಎಲ್ಲಾ ಸೇವೆಗಳನ್ನು ನೀಡುವಲ್ಲಿ ಜಿಲ್ಲೆಯಲ್ಲಿ ಕೊರಟಗೆರೆ ಪ್ರಮುಖ ಪಾತ್ರ ವಹಿಸಿದೆ.
ಕೃಷಿ ಇಲಾಖೆಯ ಮೂಲಕ ಅನೇಕ ಪರಿಹಾರಗಳನ್ನು ನೀಡಲಾಗುತ್ತಿವೆ ರೈತರ ಬಣವೆಗಳು ಬೆಂಕಿಹಾನಿಗೊಳಗಾದಾಗ ರೈತನಿಗೆ ಹಾವು ಕಡಿತದಿಂದ , ಆಕಸ್ಮಿಕವಾಗಿ ಸಿಡಿಲು ಬಡಿತದಿಂದಾಗಿ ಜೀವ ಹಾನಿಗೊಳಗಾದಾಗ ತುರ್ತಾಗಿ ಪರಿಹರಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವ ಕಮಿಟಿ ರಚಿಸಲಾಗಿದೆ. ರೈತರಿಗೆ ಸಾವಯವ ಗೊಬ್ಬರಗಳ ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ ಜೊತೆಗೆ ಇಲಾಖೆಗಳಲ್ಲಿ ಜಿಂಕ್ ಗೊಬ್ಬರ, ರಸಗೊಬ್ಬರಗಳನ್ನು ಕೃಷಿ ಅಧಿಕಾರಿಗಳ ಮೂಲಕ ತಮ್ಮ ಜಮೀನಿನ ಮಣ್ಣಿನ ಪರೀಕ್ಷ ಮಾಡಿಸಿ ಬಳಸುವುದು ಒಳಿತು ಸರ್ಕಾರ ಮುಖ್ಯ ಮಂತ್ರಿ ರೈತ ವಿಧ್ಯಾ ನಿಧಿಯನ್ನು ಕಾರ್ಯಕ್ರಮವನ್ನು ರೈತ ಮಕ್ಕಳು ಬಳಸಿಕೊಳ್ಳುವಂತೆ ತಿಳಿಸಿದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸಮ್ಮಾನ್ ಕಿಸಾನ್ ಯೋಜನೆ , ಫಸಲ್ ಭಿಮಾ ಯೋಜನೆಯಂತಹ ಕಾರ್ಯಕ್ರಗಳನ್ನ ಪಡೆದುಕೊಳ್ಳಬೇಕಾಗಿದೆ . ರೈತ ಬಾಂದವರಿಗೆ ತೋಟಗಾರಿಕೆಯಲ್ಲಿ ಹಲವಾರು ಯೋಜನೆಗಳನ್ನು ಪಡೆಯಬಹುದಾಗಿದೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಸತಿ, ರೈತರಿಗೆ ಜಾಬ್ ಕಾರ್ಡುಗಳ ಮೂಲಕ ಸ್ತ್ರೀ ಶಕ್ತಿ ಸಂಘಗಳ ಮೂಲಕ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಉತ್ತೇಜನ ನೀಡಲಾಗುತ್ತಿದೆ. ನರೇಗಾ ದ ಮೂಲಕ ರೇಷ್ಮೆ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ ಸಹಾಯ ಧನ ನೀಡುವ ಮೂಲಕ ಉತ್ತೇಜಿಸಲಾಗುತ್ತಿದೆ. ಸಲಕರಣೆಗಳಿಗೆ ಸಹಾಯ ಧನ ನೀಡಲಗುತ್ತಿದೆ. ರೇಷ್ಮೆ ಬೆಳೆಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಯುವ ರೈತರು ರೇಷ್ಮೆ ಕೃಷಿಯತ್ತ ಮುಖಮಾಡುತ್ತಿದ್ದು ಸ್ವಾವಲಂಬಿ ಜೀವನ ನೆಡೆಸುತ್ತಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇ ಲಾಖೆಯ ಮೂಲಕ ಮಕ್ಕಳಿಗೆ ಹಾಲು ಮೊಟ್ಟೆ, ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅತಂಹ ಮಕ್ಕಳಿಗೆ ವಿಶೇಷ ಹಾರೈಕೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕಾಂಶ ಕೊರತೆಯಾಗದಂತೆ ಹಲವಾರು ಕಾರ್ಯಗಳನ್ನು ರೂಪಿಸಲಾಗಿದೆ.
ಆರೋಗ್ಯ ಇಲಾಖೆಯ ಮೂಲಕ ಇದೇ ಗ್ರಾಮದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಲಾಗಿದೆ. ಕೋವಿಡ್ ನಂತಹ ಸಂದರ್ಭದಲ್ಲಿ ಸಮರ್ಥವಾಗಿ ಜಿಲ್ಲಾಡಳಿತ ಹಾಗು ತಾಲ್ಲೂಕು ಆಡಳಿತದಿಂದ ನಿಭಾಯಿಸಿದ್ದೇವೆ ಎಂದರು. ಎತ್ತಿನ ಹೊಳೆ ಕಾಮಗಾರಿಗಳಿಗೆ ಸಂಬಂಧಿದಂತೆ ರೈತರ ಅಹವಾಲುಗಳನ್ನು ಸ್ವೀಕರಿಸಿ ಶೀಘ್ರವಾಗಿ ಪರಿಹರಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಮಧುಗಿರಿ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ,ನೀಲಗೊಂಡನಹಳ್ಳಿ ಗ್ರಾ ಪಂ ಅದ್ಯಕ್ಷೆ ಲಿಂಗಮ್ಮ, ಉಪಾಧ್ಯಕ್ಷ ಕಿರಣ್ ಕುಮಾರ್, ತಹಶಿಲ್ದಾರ್ ನಹೀದಾ ಜಮ್ ಜಮ್, ತಾ. ಪಂ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಪ್ಪ, ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ ನಾಗರಾಜು, ಪಶುವೈದ್ಯಾಧಿಕಾರಿ ಡಾ. ಸಿದ್ದನಗೌಡ, ಅರಣ್ಯಾಧಿಕಾರಿ ಸುರೇಶ್, ಸಿ.ಡಿ.ಪಿ.ಓ ಅಂಬಿಕಾ, ಅನಿತಾ ಐ.ಎಸ್ ಬಿ.ಇ.ಓ ಸುಧಾಕರ್, ಮಲ್ಲಿಕಾರ್ಜುನ ಆರ್.ಡಿ.ಪಿ.ಆರ್ ಇಂಜಿನಿಯರ್ ರವಿಕುಮಾರ್, ರೇಷ್ಮೇ ಸಹಾಯಕ ನಿರ್ದೇಶಕ ಮುರಳಿಧರ, ಸಮಾಜ ಕಲ್ಯಾಣಾಧಿಕಾರಿ ಉಮಾದೇವಿ, ಬೆಸ್ಕಾ ಎ.ಇ ಇ ಮಲಯ್ಯ, ಪುಷ್ಪಲತಾ, ಕೊಳಾಲ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಿ, ಅಬಕಾರಿ ಇಲಾಖೆಯ ಶ್ರೀಲತಾ, ಮೀನುಗಾರಿಕೆ ನಿರ್ದೇಶಕ ಮಹೇಶ್ವರ, ಪ್ರಕಾಶ್ ಎ.ಎಸ್ ಐ ರಾಮಚಂದ್ರ, ಗ್ರೇಡ್ -2 ನರಸಿಂಹಮೂರ್ತಿ, ಕೋಳಾಲ ಉಪ ತಹಶಿಲ್ದಾರ್ ಮಧುಚಂದ್ರ ಪಿ.ಡಿ.ಓ ರಾಮಚಂದ್ರ ರಾವ್, ಗ್ರಾ ಪಂ ಸದಸ್ಯರುಗಳಾದ ಕೃಷ್ಣಮೂರ್ತಿ ಎನ್ ಆರ್, ರಮ್ಯ ಹನುಮಂತರಾಯಪ್ಪ, ನಾಗರಾಜು, ಕಾಮಣ್ಣ, ಗೋವಿಂದರಾಜು, ಸಂಕೇತ್, ಸುರೇಶ್ ಕುಮಾರ್, ಪಾರ್ವತಮ್ಮ, ದೇವರಾಜು, ಗ್ರಾಮದ ಮುಖಂಡರಾದ ರಾಜಣ್ಣ, ಮುರಳಿಧರ, ರಮೇಶ್, ಕುಮಾರ ರಾಮ ದೇವಸ್ಥಾನದ ಅರ್ಚಕರಾದ ರಾಮಚಂದ್ರಪ್ಪ, ರಾಜಸ್ವ ನಿರೀಕ್ಷಕರಾದ ಪ್ರತಾಪ್ ಕುಮಾರ್, ಗ್ರಾಮ ಲಿಕ್ಕಿಗರುಗಳಾದ ಬಸವರಾಜು, ಮಂಜುನಾಥ್, ರಂಗಣ್ಣ, ರಾಕೇಶ್, ಮಮತ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.