Advertisement

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

06:41 PM Nov 30, 2022 | Team Udayavani |

ಬೀಜಿಂಗ್‌: ಚೀನದ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ಅವರು (96) ಬುಧವಾರ ನಿಧನರಾಗಿದ್ದಾರೆ. ಅವರು ರಕ್ತದ ಕ್ಯಾನ್ಸರ್‌ ಮತ್ತು ಬಹು ಅಂಗಾಂಗ ವೈಫ‌ಲ್ಯಗಳಿಂದ ಶಾಂಘೈನಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

1989ರ ಜೂ.24ರಿಂದ 2002 ನ.15ರ ವರೆಗೆ ಅವರು ಅಧ್ಯಕ್ಷರಾಗಿದ್ದರು. ಕಮ್ಯೂನಿಸ್ಟ್‌ ಪಾರ್ಟಿ ಆಫ್ ಚೀನದ 5ನೇ ಅಧ್ಯಕ್ಷರಾಗಿ 1993ರಿಂದ 2003ರ ವರೆಗೆ ಕಾರ್ಯನಿರ್ವಹಿಸಿದ್ದರು.

1989ರಲ್ಲಿ ಚೀನದ ತಿಯನಾನ್ಮೆನ್‌ ಚೌಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ನಿರ್ದಯವಾಗಿ ಮಟ್ಟ ಹಾಕಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಕ್ಕೆ ಹಿನ್ನಡೆ ಉಂಟಾಗಿತ್ತು.

ನಂತರ ಅವರು ಅಧ್ಯಕ್ಷರಾದ ಬಳಿಕ ಮಾರುಕಟ್ಟೆ ಆಧಾರಿತ ಆರ್ಥ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next