Advertisement

ಚಕ್ಡಾ ಎಕ್ಸ್ ಪ್ರೆಸ್ ಗೆ ನಾಳೆ ವಿದಾಯ ಪಂದ್ಯ; ಇಲ್ಲಿದೆ ಜೂಲನ್ ಗೋಸ್ವಾಮಿ ಸಾಧನೆಗಳ ಪಟ್ಟಿ

12:13 PM Sep 23, 2022 | Team Udayavani |

ಲಂಡನ್: ಭಾರತೀಯ ವನಿತಾ ಕ್ರಿಕೆಟ್ ದಂತಕಥೆ ಜೂಲನ್ ಗೋಸ್ವಾಮಿ ಶನಿವಾರ (ಸೆಪ್ಟೆಂಬರ್ 24) ಲಾರ್ಡ್ಸ್‌ ನಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ತಮ್ಮ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. 39 ವರ್ಷ ವಯಸ್ಸಿನ ಜೂಲನ್ ತನ್ನ 20 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ಸಾಧಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 12 ಟೆಸ್ಟ್, 203 ಏಕದಿನ ಮತ್ತು 68 ಟಿ20 ಪಂದ್ಯಗಳನ್ನಾಡಿರುವ ಜೂಲನ್ ಗೋಸ್ವಾಮಿ, ಒಟ್ಟು 353 ವಿಕೆಟ್ ಕಬಳಿಸಿದ್ದಾರೆ.  ಅನುಭವಿ ವೇಗದ ಬೌಲರ್ ಆಗಿರುವ ಜೂಲನ್ ಜೀವನದ ಕುರಿತಾಗಿ ‘ಚಕ್ಡಾ ಎಕ್ಸ್ ಪ್ರೆಸ್’ ಎಂಬ ಹೆಸರಿನ ಚಿತ್ರ ಬಾಲಿವುಡ್ ನಲ್ಲಿ ಬರುತ್ತಿದ್ದು, ಜೂಲನ್ ಪಾತ್ರದಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಜೂಲನ್ ಗೋಸ್ವಾಮಿ ವೃತ್ತಿ ಜೀವನದ ಕೆಲ ಸಾಧನೆಗಳು ಇಲ್ಲಿದೆ.

ವೇಗದ ಬೌಲರ್ ಆಗಿರುವ ಜೂಲನ್ ಗೋಸ್ವಾಮಿ ಮಹಿಳಾ ವಿಶ್ವಕಪ್‌ ನಲ್ಲಿ ಅತಿ ಹೆಚ್ಚು ವಿಕೆಟ್‌ಗಳ ಪಡೆದಿರುವ ದಾಖಲೆಯನ್ನು ಹೊಂದಿದ್ದಾರೆ. ವಿಶ್ವಕಪ್ ನಲ್ಲಿ 40 ವಿಕೆಟ್ ಪಡೆದಿರುವ ಜೂಲನ್, ಆಸ್ಟ್ರೇಲಿಯಾದ ಲಿನ್ ಫುಲ್‌ಸ್ಟನ್ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ

ಮಿಥಾಲಿ ರಾಜ್ ನಂತರ ಏಕದಿನ ಕ್ರಿಕೆಟ್ ನಲ್ಲಿ ಸುದೀರ್ಘ ವೃತ್ತಿಜೀವನವನ್ನು ಹೊಂದಿರುವ ಎರಡನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಜೂಲನ್ ಗೋಸ್ವಾಮಿ ಅವರು 20 ವರ್ಷ ಮತ್ತು 75 ದಿನಗಳ ಕಾಲ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ್ದಾರೆ.

ಇದನ್ನೂ ಓದಿ:ಭಾರತದ ಟಿ20 ತಂಡದಲ್ಲಿ ಈ ಎಡಗೈ ಆಟಗಾರ ಇರಲೇಬೇಕು: ಸಲಹೆ ನೀಡಿದ ಗಿಲ್ ಕ್ರಿಸ್ಟ್

Advertisement

ಏಕದಿನ ಕ್ರಿಕೆಟ್ ನಲ್ಲಿ 1000 ರನ್, 50 ವಿಕೆಟ್ ಮತ್ತು 50 ಕ್ಯಾಚ್ ಪಡೆದಿರುವ ಅಪರೂಪದ ದಾಖಲೆಯನ್ನು ಜೂಲನ್ ಗೋಸ್ವಾಮಿ ಹೊಂದಿದ್ದಾರೆ.

ಜೂಲನ್ ಗೋಸ್ವಾಮಿ ಅವರು 2006 ರಲ್ಲಿ ಇಂಗ್ಲೆಂಡ್ ವಿರುದ್ಧ ಟೌಂಟನ್‌ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಕಬಳಿಸಿ ದಾಖಲೆ ನಿರ್ಮಿಸಿದ್ದರು. ಆಗ ಕೇವಲ 23 ವರ್ಷ ವಯಸ್ಸಿನವರಾಗಿದ್ದ ಅವರು, ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದ ಅತ್ಯಂತ ಕಿರಿಯ ಆಟಗಾರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next