Advertisement

ವನಿತಾ ಪ್ರೀಮಿಯರ್‌ ಲೀಗ್‌: ಜೂಲನ್‌ ಗೋಸ್ವಾಮಿಗೆ ಅವಳಿ ಜವಾಬ್ದಾರಿ

11:34 PM Feb 05, 2023 | Team Udayavani |

ಮುಂಬಯಿ: ಇತ್ತೀಚೆಗಷ್ಟೇ ಕ್ರಿಕೆಟ್‌ ವಿದಾಯ ಘೋಷಿಸಿದ ಲೆಜೆಂಡ್ರಿ ವೇಗಿ ಜೂಲನ್‌ ಗೋಸ್ವಾಮಿ ಅವರಿಗೆ ಅವಳಿ ಜವಾಬ್ದಾರಿ ಅರಸಿ ಬಂದಿದೆ. ಅವರು ಮುಂಬರುವ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮೆಂಟರ್‌ ಹಾಗೂ ಬೌಲಿಂಗ್‌ ಕೋಚ್‌ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ.

Advertisement

ಇಂಗ್ಲೆಂಡ್‌ ವನಿತಾ ತಂಡದ ಮಾಜಿ ನಾಯಕಿ ಚಾರ್ಲೋಟ್‌ ಎಡ್ವರ್ಡ್ಸ್‌ ಮುಂಬೈ ತಂಡದ ಪ್ರಧಾನ ಕೋಚ್‌ ಆಗಿರುವರು. ಭಾರತ ತಂಡದ ಮಾಜಿ ಆಲ್‌ರೌಂಡರ್‌ ದೇವಿಕಾ ಪಲಿಕರ್‌ ಬ್ಯಾಟಿಂಗ್‌ ಕೋಚ್‌, ತೃಪ್ತಿ ಚಂದ್ಗಾಡ್ಕರ್‌ ಭಟ್ಟಾಚಾರ್ಯ ತಂಡದ ಮ್ಯಾನೇಜರ್‌ ಆಗಿ ನೇಮಕಗೊಂಡಿದ್ದಾರೆ.

ಕಳೆದ ವನಿತಾ ಫ್ರಾಂಚೈಸಿಗಳ ಹರಾಜಿನಲ್ಲಿ ಮುಂಬೈ 912.99 ಕೋಟಿ ರೂ.ಗೆ ಮಾರಾಟವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next