Advertisement

JHONTY SON OF JAYRAJ: ಜಯರಾಜ್‌ ಸುತ್ತ ಮತ್ತೊಂದು ಚಿತ್ರ

04:00 PM Sep 17, 2024 | Team Udayavani |

ʼಜಾಂಟಿ ಸನ್‌ ಆಫ್ ಜಯರಾಜ್‌’ ಎಂಬ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಸುಗೂರು ಕುಮಾರ್‌ ನಿರ್ಮಾಣದ ಈ ಚಿತ್ರವನ್ನು ಆನಂದರಾಜ್‌ ನಿರ್ದೇಶನ ಮಾಡಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಆನಂದರಾಜ್‌, “ಜಯರಾಜ್‌ ನಂತರದ ದಿನಗಳ ಸಂದರ್ಭದಲ್ಲಿ ಹಣಕಾಸು ವ್ಯವಹಾರ, ಮಾರ್ಕೆಟ್‌ ದಂಧೆ ಎಲ್ಲವು ರಾರಾಜಿಸುತ್ತಿತ್ತು. ಇಂತಹ ವಿಷಯಗಳನ್ನಿಟ್ಟುಕೊಂಡು ಚಿತ್ರಕಥೆ ಬರೆಯಲಾಗಿದೆ.

ಜಯರಾಜ್‌ ಮಗನೇ ಪಾತ್ರವಾಗಿ ಬರುತ್ತಾರೆ.ಆಗಿನ ಕಾಲಘಟ್ಟದಲ್ಲಿ ಇದ್ದಂತಹ ಪಾತ್ರಗಳನ್ನು ಕಾಲ್ಪನಿಕವಾಗಿ ತೋರಿಸಲಾಗಿದೆ. ಜತೆಗೆ ತಾಯಿ ಸೆಂಟಿಮೆಂಟ್, ನವಿರಾದ ಪ್ರೀತಿ ಸನ್ನಿವೇಶದ ಜೊತೆಗೆ ಸ್ನೇಹದ ಬಗ್ಗೆಯೂ ಹೇಳಲಾಗಿದೆ’ ಎಂದರು. ‌

ನಾಯಕ ಅಜಿತ್‌ ಜಯರಾಜ್‌ ಮಾತನಾಡಿ, “ಅಪ್ಪನ ಪಾತ್ರ ಮಾಡುವಾಗ ನರ್ವಸ್‌ ಆಗಿದೆ. ನಿರ್ದೇಶಕರು ಹೇಳಿದಾಗ ಓಕೆ ಅಂತ ಹೇಳಿದ್ದೆ. ಕ್ಯಾಮಾರ ಮುಂದೆ ನಿಂತಾಗ ನಡುಕ ಬಂತು. ಅಂತಹಪವರ್‌ ಫ‌ುಲ್‌ ಪಾತ್ರ ಹೇಗೆ ಮಾಡುವುದು ಎಂಬ ಭಯವಿತ್ತು. ಕೊನೆ ಒಂದು ದೃಶ್ಯದಲ್ಲಿ ನಟಿಸಿದಾಗ ಧೈರ್ಯ ಬಂತು. ಅಪ್ಪನ ಕಾಲ, ಮಗನಾಗಿ ಹೀಗೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ನಾಯಕಿ ನಿವಿಷ್ಕಾ ಪಾಟೀಲ್‌ ಚಿತ್ರೀಕರಣ ಅನುಭವಗಳನ್ನು ಮೆಲುಕು ಹಾಕಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next