ಜೋಧ್‍ಪುರ : ಜೀಪ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿಗಳು ಸೇರಿ 11 ಮಂದಿ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ರಾಜಸ್ತಾನದ ಜೋಧ್‍ಪುರ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.
ಮೃತರಲ್ಲಿ 6 ಮಹಿಳೆಯರು, 1 ಮಗು ಹಾಗೂ 4 ಮಂದಿ ಪುರುಷರು ಸೇರಿದ್ದು ಇದರಲ್ಲಿ ಕಳೆದ ಫೆಬ್ರವರಿ 27ರಂದು ಮದುವೆಯಾದ ನವ ಜೋಡಿಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಬಲೋತ್ರ ಗ್ರಾಮದ ನಿವಾಸಿಗಳು ರಾಮ ದೇವೋರ್ ಪ್ರದೇಶದಲ್ಲಿರುವ ರಾಮದೇವೋ ದೇವರಿಗೆ ಪೂಜೆ ಸಲ್ಲಿಸಲು ಕುಟುಂಬ ಸಮೇತ ಜೀಪಿನಲ್ಲಿ ಹೊರಟಿದ್ದು ಬಲೋತ್ರ-ಪಲೋಡಿ ರಾಷ್ಟ್ರೀಯ ಹೆದ್ದಾರಿ ತಲುಪುತಿದ್ದಂತೆ ಟ್ರಕ್ ಜೀಪಿನ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸೇಗರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಜೋಧ್‍ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂತಾಪ: ಭೀಕರ ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ತೀವ್ರ ಸಂತಾಪ ಸೂಚಿಸಿದ್ದಾರೆ.