ರಾಂಚಿ: ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಸೋಮವಾರ ಆರಂಭವಾಗಿದ್ದು, ಮೊದಲ ಹಂತದಲ್ಲಿ ಜೆಎಂಎಂ- ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಬಿಜೆಪಿ ಸಮಬಲದ ಹೋರಾಟದಲ್ಲಿದೆ.
ನವೆಂಬರ್ 30ರಿಂದ ಡಿಸೆಂಬರ್ 20ರವರೆಗೆ ಒಟ್ಟು ಐದು ಹಂತಗಳಲ್ಲಿ ಮತದಾನ ನಡೆದಿತ್ತು. ಒಟ್ಟಾರೆ ಸುಮಾರು ಶೇ.65.17 ಮತದಾನ ದಾಖಲಾಗಿತ್ತು.
ಹಾಲಿ ಮುಖ್ಯಮಂತ್ರಿ ರಘುಬರ್ ದಾಸ್ ನೇತೃತ್ವದ ಬಿಜೆಪಿ ಆರಂಭಿಕ ಹಿನ್ನಡೆ ಸಾಧಿಸಿದೆ. ಬೆಳಿಗ್ಗೆ 9.10ರ ಸುಮಾರಿಗೆ ಎಲ್ಲಾ 81 ಕ್ಷೇತ್ರಗಳ ಆರಂಭಿಕ ಮತ ಎಣಿಕೆ ವಿವರ ಲಭ್ಯವಾಗಿದ್ದು ಬಿಜೆಪಿ 34 ಕ್ಷೇತ್ರಗಳಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ 18 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೈತ್ರಿ)
ಆರ್ ಜೆಡಿ ಎರಡು, ಎಜೆಎಸ್ ಯು ಏಳು ಮತ್ತು ಜೆವಿಎಂ ಮೂರು ಮತ್ತು ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಮತಗಟ್ಟೆ ಸಮೀಕ್ಷೆಗಳು ಜೆಎಂಎಂ+ ಕಾಂಗ್ರೆಸ್ ಮೈತ್ರಿಕೂಟಕ್ಕೆ ಗದ್ದುಗೆ ಎರುವ ಅವಕಾಶ ಎಂದು ವರದಿ ನೀಡಿದ್ದವು.