ರಾಂಚಿ: ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಆಪ್ತ ಪ್ರೇಮ್ ಪ್ರಕಾಶ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ (ಆಗಸ್ಟ್ 25) ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಶಿರಾ ಬಳಿ ಭೀಕರ ರಸ್ತೆ ಅಪಘಾತ : 9 ಜನರ ದುರ್ಮರಣ, ಹಲವರ ಸ್ಥಿತಿ ಗಂಭೀರ
ಬುಧವಾರ ಪ್ರಕಾಶ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದ ವೇಳೆ ಎರಡು ಎ.ಕೆ.47 ರೈಫಲ್ಸ್ ಹಾಗೂ 60 ಗುಂಡುಗಳನ್ನು ವಶಪಡಿಸಿಕೊಂಡಿತ್ತು. ಪ್ರೇಮ್ ಪ್ರಕಾಶ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿಕಟವರ್ತಿ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ವರ್ಗಾವಣೆ ತಡೆ ಕಾಯ್ದೆಯನ್ವಯ ಪ್ರಕಾಶ್ ಅವರನ್ನು ಇಂದು ಮುಂಜಾನೆ ಬಂಧಿಸಿದ್ದು, ರಾಂಚಿಯ ಕೋರ್ಟ್ ಗೆ ಹಾಜರುಪಡಿಸಿ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಮತ್ತೊಂದೆಡೆ ಎ.ಕೆ. 47 ರೈಫಲ್ಸ್ ಪತ್ತೆಯಾದ ಪ್ರೇಮ್ ಪ್ರಕಾಶ್ ಅವರನ್ನು ಮುಖ್ಯಮಂತ್ರಿ ಹೇಮಂತ್ ಸೊರೇನ್ ನಿಕಟವರ್ತಿ ಎಂಬ ವರದಿಯನ್ನು ಜಾರ್ಖಂಡ್ ಸರ್ಕಾರ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಮೊದಲು ಪ್ರಕರಣದ ಕುರಿತು ಜಾರ್ಖಂಡ್ ಸಿಎಂ ರಾಜಕೀಯ ನಿಕಟವರ್ತಿ ಪಂಕಜ್ ಮಿಶ್ರಾ ಅವರನ್ನು ಇ.ಡಿ. ಬಂಧಿಸಿತ್ತು.