Advertisement
ಆದರೆ ಜ.26ರಿಂದ ಅನ್ವಯವಾಗುವಂತೆ ಜಾರ್ಖಂಡ್ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ ಬರೋಬ್ಬರಿ 25 ರೂ. ಇಳಿಕೆ ಮಾಡಿದೆ.ಈ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಣೆ ಮಾಡಿದ್ದಾರೆ.
Related Articles
Advertisement
ಇದು ಹೇಗೆ ಅನ್ವಯ?ಅಂದ ಹಾಗೆ ನೀವು ಪೆಟ್ರೋಲ್ ಬಂಕ್‌ನಲ್ಲಿ ಲೀಟರ್‌ಗೆ 25 ರೂ. ಕಡಿಮೆ ಕೊಡುವಂತಿಲ್ಲ. ಪೆಟ್ರೋಲ್ ಬಂಕಿನಲ್ಲಿ ಅಂದಿನ ಪೆಟ್ರೋಲ್ ದರವನ್ನೇ ಕೊಡಬೇಕು. ನಂತರ ಸರ್ಕಾರ ನಿಮಗೆ ಲೀಟರ್‌ಗೆ 25 ರೂ.ನಂತೆ ನಿಮ್ಮ ಬ್ಯಾಂಕ್ ಖಾತೆಗೆ ಪಾವತಿಸುತ್ತದೆ. ನಿತ್ಯಬಳಕೆಯ ಸಿಲಿಂಡರ್‌ಗೆ ಸರ್ಕಾರ ಸಬ್ಸಿಡಿ ಕೊಡುತ್ತಿದ್ದ ರೀತಿಯಲ್ಲೇ ಪೆಟ್ರೋಲ್ ಬೆಲೆಯನ್ನೂ ನೇರವಾಗಿ ಖಾತೆಗೆ ಹಾಕಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.