ರಾಂಚಿ: “ಕಾಂಗ್ರೆಸ್ ಅನ್ನು ಮುಗಿಸಲು ಮುಖ್ಯಮಂತ್ರಿ ಹೇಮಂತ್ ಸೊರೇನ್ ಯೋಚಿಸುತ್ತಿದ್ದಾರೆ’ ಹೀಗೆಂದು ಝಾರ್ಖಂಡ್‌ನ ಕಾಂಗ್ರೆಸ್‌ನ ಶಾಸಕ ಸಚಿವ ಬನ್ನಾ ಗುಪ್ತಾ ಆರೋಪ ಮಾಡಿದ್ದಾರೆ.
ಇದರಿಂದಾಗಿ 2019ರ ವಿಧಾನಸಭೆ ಚುನಾ ವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಅಂಶ ಜಾಹೀರಾಗುವಂತೆ ಮಾಡಿದೆ.
ಎಲ್ಲದಕ್ಕಿಂತ ಹೆಚ್ಚಾಗಿ, ಮುಂದಿನ ಲೋಕಸಭೆ ಚುನಾವಣೆ ಒಳಗಾಗಿ ಕಾಂಗ್ರೆಸ್-ಬಿಜೆಪಿ ಹೊರ ತಾಗಿರುವ ಮೈತ್ರಿಕೂಟ ರಚನೆ ಪ್ರಯತ್ನಗಳು ನಡೆಯುತ್ತಿರುವಾಗಲೇ ಈ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಮಾರ್ಚ್ 1ರಿಂದ ನಂದಿಯಲ್ಲಿ ರಾಜ್ಯ ಮಟ್ಟದ ಶಿವೋತ್ಸವ ಕಾರ್ಯಕ್ರಮ : ಸಚಿವ ಡಾ.ಕೆ.ಸುಧಾಕರ್
ಮಂಗಳವಾರ ನಡೆದ ಕಾಂಗ್ರೆಸ್‌ನ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ಜೆಎಂಎಂ ಕಾಂಗ್ರೆಸ್‌ನ ಮತ ಬ್ಯಾಂಕ್ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತದೆ ಎಂದಾದರೆ ಆ ಪಕ್ಷದ ಜತೆಗೆ ಮೈತ್ರಿ ಮುಂದುವರಿಸುವುದರಲ್ಲಿ ಅರ್ಥ ವಿಲ್ಲ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಪಕ್ಷವನ್ನು ಮುಗಿಸಲು ಯೋಚಿಸುತ್ತಿ ದ್ದಾರೆ’ ಎಂದು ಆರೋಪಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸೊರೇನ್ “ದೋಣಿ ನಡೆಸುವವನೇ ಅದನ್ನು ಮುಳುಗಿಸಲು ಮುಂದಾದರೆ ಪಾರು ಮಾಡುವವರು ಯಾರು’ ಎಂದು ಪ್ರಶ್ನಿಸಿದ್ದಾರೆ. ದೇಶಕ್ಕಾಗಿ ನಾವೆಲ್ಲರೂ ಒಂದಾಗ ಬೇಕಾಗಿದೆ ಎಂದು ಹೇಳಿದ್ದಾರೆ.