Advertisement
ಸೊರೇನ್ ಅವರು ಪಕ್ಷದ ಪ್ರಮುಖರೊಂದಿಗೆ ಸಭೆಯೊಂದನ್ನು ನಡೆಸಿ ಮಹತ್ವದ ಮಾತುಕತೆಯನ್ನೂ ನಡೆಸಿ ರಾಜಕೀಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲಿಯಾದರೂ ಬಂಧನವಾದಲ್ಲಿ ಪರ್ಯಾಯ ವ್ಯವಸ್ಥೆಯ ಕುರಿತೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ”ಜನವರಿ 31 ರಂದು ಇಡಿ ಕರೆ ಮಾಡಿದಾಗ ಯಾರ ಸೂಚನೆಯ ಮೇರೆಗೆ ಇಡಿ ದೆಹಲಿಯಲ್ಲಿರುವ ಹೇಮಂತ್ ಸೊರೇನ್ ಮನೆಗೆ ಹೋಗಿತ್ತು? 36 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅವರಿಲ್ಲದಾಗ ಯಾರಿಗಾದರೂ ಅವರ ಮನೆಗೆ ಪ್ರವೇಶಿಸಲು ಅಧಿಕಾರವಿದೆಯೇ? ಅವರನ್ನು ಕ್ರಿಮಿನಲ್‌ನಂತೆ ನಡೆಸಿಕೊಳ್ಳಲಾಗುತ್ತಿದೆ. ಹೇಮಂತ್ ಸೋರೆನ್ ಅವರು ಹಿಮಂತ ಬಿಸ್ವ ಶರ್ಮ, ಅಜಿತ್ ಪವಾರ್ ಅಥವಾ ನಿತೀಶ್ ಕುಮಾರ್ ಅಲ್ಲ. ಅವರು ವೀರ ಶಿಬು ಸೊರೇನ್ ಅವರ ಪುತ್ರ” ಎಂದು ಕಿಡಿ ಕಾರಿದ್ದಾರೆ.
Related Articles
Advertisement
JMM ನಾಯಕ ಮನೋಜ್ ಪಾಂಡೆ ಸುದ್ದಿಗಾರರೊಂದಿಗೆ ಮಾತನಾಡಿ “ಇವೆಲ್ಲವೂ ಬಹಿರಂಗಪಡಿಸಲಾಗದ ತಂತ್ರಗಳು. ಸರ್ವಾಧಿಕಾರದ ವಿರುದ್ಧ ಹೋರಾಡಲು, ನಾವು ಘನ ಕಾರ್ಯತಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ದಯವಿಟ್ಟು ನಿರೀಕ್ಷಿಸಿ. ಬ್ರಿಜ್ ಭೂಷಣ್ ಸಿಂಗ್ ನಾಪತ್ತೆಯಾಗಿದ್ದ ವೇಳೆ ಬಿಜೆಪಿಯವರು ಎಂದಾದರೂ ದೂರು ದಾಖಲಿಸಿದ್ದರೇ? ಎಂದು ಪ್ರಶ್ನಿಸಿದರು.