ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮೇ 31ರಂದು ನವದೆಹಲಿಯಲ್ಲಿ ಭಾರತೀಯ ಚುನಾವಣಾ ಆಯೋಗದ ಮುಂದೆ ಹಾಜರಾಗುವ ಸಾಧ್ಯತೆ ಇದೆ.
Advertisement
ಚುನಾವಣಾ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಳ್ಳಲಿದ್ದಾರೆ. ನಿಯಮ ಮೀರಿ ಜಾರ್ಖಂಡ್‌ನಲ್ಲಿ ಗಣಿಯ ಗುತ್ತಿಗೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡ ಆರೋಪವನ್ನು ಮುಖ್ಯಮಂತ್ರಿ ಎದುರಿಸುತ್ತಿದ್ದಾರೆ.
ಬಿಜೆಪಿ ಮುಖಂಡರೊಬ್ಬರು ಜಾರ್ಖಂಡ್ ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದ ದೂರು ಚುನಾವಣಾ ಆಯೋಗಕ್ಕೆ ವರ್ಗಾವಣೆಗಿತ್ತು. ಅದನ್ನು ಪರಿಶೀಲಿಸಿದ ಆಯೋಗ ಈಗಾಗಲೇ ಅವರಿಗೆ ನೋಟಿಸ್ ನೀಡಿದೆ.