ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಕೊನೆಯ ಮತ್ತು ಐದನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು , 16 ಸ್ಥಾನಗಳಿಗೆ 29 ಮಹಿಳೆಯರು ಸೇರಿದಂತೆ 237 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಸಚಿವ ರಣಧೀರ್ ಸಿಂಗ್ , ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ನಾಯಕ ಹೇಮಂತ್ ಸೊರೆನ್ ಕೂಡ ಇಂದು ಕಣದಲ್ಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 5 ಗಂಟೆಗೆ ಕೊನೆಗೊಳ್ಳಲಿದೆ. ಕೆಲವೆಡೆ 3 ಗಂಟೆಗೆ ಮುಕ್ತಾಯವಾಗಲಿದೆ.
ರಾಜಮಹಲ್, ಬೋರಿಯೊ (ST), ಬರ್ಹೈಟ್ (ST), ಲಿಟಿಪರಾ (ST), ಪಕೂರ್, ಮಹೇಶಪುರ (ST), ಸಿಕಾರಿಪಾರ (ST), ನಲ್ಲಾ, ಜಮ್ತಾರಾ, ಡುಮ್ಕಾ (ST), ಜಮಾ(ST), ಜರ್ಮುಂಡಿ, ಶರತ್, ಪೊರೆಯಾಹತ್, ಗೊಡ್ಡಾ ಮತ್ತು ಮಹಾಗಮ ಮುಂತಾದ ಪ್ರದೇಶದಲ್ಲಿ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.
237 ಅಭ್ಯರ್ಥಿಗಳ ಭವಿಷ್ಯವನ್ನು 40,05,200 ಮತದಾರರು ನಿರ್ಧರಿಸಲಿದ್ದಾರೆ. ಜಾರ್ಖಂಡ್ 81 ವಿಧಾನಸಭಾ ಕ್ಷೇತ್ರಗಳ ಪೈಕಿ 65 ಸ್ಥಾನಗಳಿಗೆ ಈಗಾಗಲೇ 4 ಹಂತದಲ್ಲಿ ಮತದಾನ ನಡೆದಿದೆ.
ಡಿಸೆಂಬರ್ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.