Advertisement

ಮಾಸ್ಕ್ ಧರಿಸದಿದ್ದರೇ 2 ವರ್ಷ ಜೈಲು, 1 ಲಕ್ಷ ದಂಡ: ಸುಗ್ರಿವಾಜ್ಞೆ ಜಾರಿಗೆ ತಂದ ಈ ರಾಜ್ಯ !

02:12 PM Jul 24, 2020 | Mithun PG |

ರಾಂಚಿ: ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸದ ಮಾತ್ರವಲ್ಲದೆ ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಓಡಾಡುವ ವ್ಯಕ್ತಿಗಳಿಗೆ 2 ವರ್ಷದವರೆಗೂ ಜೈಲು ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಲಾಗುವುದು ಎಂದು ಜಾರ್ಖಂಡ್ ನ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

ರಾಜ್ಯ ಸಚಿವ ಸಂಪುಟದಲ್ಲಿ ‘ಸಾಂಕ್ರಮಿಕ ರೋಗದ ಸುಗ್ರಿವಾಜ್ಞೆ 2020ಕ್ಕೆ’ ಅನುಮೋದನೆ ನೀಡಲಾಗಿದ್ದು ಹೊಸ ನಿಯಮದ ಪ್ರಕಾರ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ವ್ಯಕ್ತಿಗಳಿಗೆ 2 ವರ್ಷ ಜೈಲು ಮತ್ತು  1ಲಕ್ಷ ದಂಡ ಶಿಕ್ಷೆ ವಿಧಿಸಬಹುದಾಗಿದೆ.

ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಹೊರಡಿಸಿದ ನಿರ್ದೇಶನಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆ ವಿಧಿಸುವ ಉದ್ದೇಶವನ್ನು ಈ ಸುಗ್ರೀವಾಜ್ಞೆ ಹೊಂದಿದೆ.

ಜಾರ್ಖಂಡ್ ರಾಜ್ಯದಲ್ಲಿ ಒಟ್ಟು 6,682 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಈವರೆಗೆ ಅರವತ್ತನಾಲ್ಕು ಜನರು ಈ ಮಾರಕ ವೈರಸ್ ಗೆ  ಬಲಿಯಾಗಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next