Advertisement

ವಿಶ್ವದಾಖಲೆಯೊಂದಿಗೆ ಪ್ಯಾರಾ ಅರ್ಹತೆ ಪಡೆದ ಜಜಾರಿಯಾ

09:56 PM Jul 01, 2021 | Team Udayavani |

ಹೊಸದಿಲ್ಲಿ: ಭಾರತದ ಖ್ಯಾತ ಪ್ಯಾರಾಲಿಂಪಿಯನ್‌ ಜಾವೇಲಿನ್‌ ಎಸೆತಗಾರ ದೇವೇಂದ್ರ ಜಜಾರಿಯಾ ತಮ್ಮದೇ ವಿಶ್ವದಾಖಲೆಯನ್ನು ತಿದ್ದಿ ಬರೆದು ಟೋಕಿಯೊ ಒಲಿಂಪಿಕ್ಸ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.

Advertisement

ಇಲ್ಲಿನ “ಜವಾಹರಲಾಲ್‌ ನೆಹರೂ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ 40 ವರ್ಷದ ಜಜಾರಿಯಾ 65.71 ಮೀ. ಸಾಧನೆಯೊಂದಿಗೆ ನೂತನ ವಿಶ್ವ ದಾಖಲೆ ಬರೆದರು. 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 63.97 ಮೀ. ಸಾಧನೆಗೈದದ್ದು ಅವರೇ ಸ್ಥಾಪಿಸಿದ ವಿಶ್ವದಾಖಲೆಯಾಗಿತ್ತು. ಅಂದಿನ ಗೇಮ್ಸ್‌ನ ಎಫ್-46 ವಿಭಾಗದಲ್ಲಿ ಜಜಾರಿಯಾ 2 ಚಿನ್ನದ ಪದಕ ಜಯಿಸಿದ್ದರು. ಪ್ಯಾರಾಲಿಂಪಿಕ್ಸ್‌ ಕೂಟ ವೊಂದರಲ್ಲಿ 2 ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹಿರಿಮೆ ಅವರದಾಗಿತ್ತು.

ಬಂಗಾರದ ನಿರೀಕ್ಷೆ :

2004ರ ಅಥೇನ್ಸ್‌ ಪ್ಯಾರಾಲಿಂಪಿಕ್ಸ್‌ ನಲ್ಲೂ ದೇಶವನ್ನು ಪ್ರತಿನಿಧಿಸಿದ ದೇವೇಂದ್ರ ಜಜಾರಿಯಾ 62.15 ಮೀ. ಎಸೆದು ಚಿನ್ನ ಜಯಿಸಿದ್ದರು. ಅಂದು ಇದು ವಿಶ್ವದಾಖಲೆಯ ಸಾಧನೆ ಆಗಿತ್ತು. ಬಳಿಕ ರಿಯೋದಲ್ಲಿ ತಮ್ಮದೇ ವಿಶ್ವದಾಖಲೆಯನ್ನು ಮುರಿದರು. ಟೋಕಿಯೊದಲ್ಲೂ ದೇಶ ಇವರಿಂದ ಬಂಗಾರವನ್ನು ನಿರೀಕ್ಷಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next