Advertisement

ಮ್ಯಾಜಿಕ್‌ ಮಿರರ್‌ ಬಳಸಿ ಆಭರಣ ಶಾಪಿಂಗ್‌

02:25 PM May 26, 2018 | Team Udayavani |

ದೇಶದ  ಹೆಸರಾಂತ ಆಭರಣ ಮಾರಾಟ ಸಂಸ್ಥೆ ತನಿಷ್ಕ್ ಸಹಯೋಗದ ಕ್ಯಾರೆಟ್‌ ಲೇನ್‌ ನಗರದಲ್ಲಿ 6ನೇ ಮಳಿಗೆಯನ್ನು ತೆರೆದಿದೆ. ಕ್ಯಾರೆಟ್‌ ಲೇನ್‌ ವಜ್ರದ ಆಭರಣಗಳಿಗೆ ಹೆಸರನ್ನು ಪಡೆದಿದೆ. ಆಭರಣಗಳನ್ನು ಕೊಳ್ಳುವುದೆಂದರೆ ಸುಮ್ಮನೆ ಅಲ್ಲ. ಗೃಹೋಪಯೋಗಿ ವಸ್ತುಗಳನ್ನು ಮಾಲ್‌ನಲ್ಲಿ ನಿಂತು ಶಾಪಿಂಗ್‌ ಮಾಡಿದ ಹಾಗಲ್ಲ ಅದು. ಅದು ಸಮಯ ಮತ್ತು ತಾಳ್ಮೆಯನ್ನು ಬೇಡುತ್ತದೆ.

Advertisement

ವೃತ್ತಿ ಬದುಕಿನ ಜಂಜಾಟದ ನಡುವೆ ಸಿಲುಕಿ ಎಲ್ಲ ಕೆಲಸಗಳೂ ತ್ವರಿತವಾಗಿ ಆಗಬೇಕು ಎನ್ನುವವರಿಗಾಗಿಯೇ ಕ್ಯಾರೆಟ್‌ ಲೇನ್‌ ಮಳಿಗೆಗಳನ್ನು ತೆರೆದಿದೆ. ಇಲ್ಲಿ ಪರಿಣತರ ಸಹಾಯದಿಂದ ಅತ್ಯುತ್ತಮ ವಿನ್ಯಾಸಗಳ ಆಭರಣಗಳನ್ನು ಗ್ರಾಹಕರು ತ್ವರಿತವಾಗಿ ಆರಿಸಿಕೊಳ್ಳಬಹುದು. ಅಲ್ಲದೆ ಮಳಿಗೆಯಲ್ಲಿ ಮ್ಯಾಜಿಕ್‌ ಮಿರರ್‌ ತಂತ್ರಜ್ಞಾನವನ್ನೂ ಅಳವಡಿಸಿರುವುದರಿಂದ ಯಾವ ಬಗೆಯ ಆಭರಣವನ್ನೂ ಕ್ಷಣಮಾತ್ರದಲ್ಲಿ ತೊಟ್ಟು ತಮಗೊಪ್ಪುತ್ತದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬಹುದಾಗಿದೆ.

ಎಲ್ಲಿ?: 207, ತನಿಷ್ಕ್ ಮಳಿಗೆ ಬಳಿ, ಔಟರ್‌ ರಿಂಗ್‌ ರೋಡ್‌, ಮಾರತ್ತಹಳ್ಳಿ

Advertisement

Udayavani is now on Telegram. Click here to join our channel and stay updated with the latest news.