ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರ ರಮೇಶ ಭವನ ಬಳಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಮಂಗಳವಾರ ಬೆಳಗಿನ ಜಾವ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನವಾಗಿದೆ.
ಭುವನೇಶ್ವರಿ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ ಕಳ್ಳರು ಮೊದಲು ಸಿಸಿ ಕ್ಯಾಮೆರಾಕ್ಕೆ ಸ್ಪ್ರೇ ಮಾಡಿ, ಗ್ಯಾಸ್ ಕಟ್ಟರ್‌ನಿಂದ ಕೀಲಿ ತುಂಡು ಕತ್ತರಿಸಿ, ನಂತರ ಗ್ಲಾಸ್ ಒಡೆದು ಒಳನುಗ್ಗಿ 800 ಗ್ರಾಂ ಚಿನ್ನಾಭರಣ ಮತ್ತು 50ಕೆಜಿ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ.
ಜಗದೀಶ ದೈವಜ್ಞ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಬೆಳಗಿನ ಜಾವ 2:00 ಗಂಟೆ ಸುಮಾರಿಗೆ ಕಳ್ಳತನ ನಡೆದಿರುವ ಸಾಧ್ಯತೆಯಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ ಭೇಟಿಕೊಟ್ಟು ಅಂಗಡಿಯ ಪರಿಶೀಲನೆ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳಿಂದ ಕಳ್ಳತನ ನಡೆದಿರುವ ಸಾಧ್ಯತೆಗಳಿವೆ. ಒಂದು ಸಿಸಿ ಕ್ಯಾಮೆರಾದಲ್ಲಿ ಇಬ್ಬರು ವ್ಯಕ್ತಿಗಳ ದೃಶ್ಯಗಳು ಸೆರೆಯಾಗಿವೆ. ಇನ್ನುಳಿದ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Manipal: ಫ್ಲ್ಯಾಟ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ರಕ್ಷಣೆ…