Advertisement

ಜ್ಯುವೆಲ್ಲರಿ ಫೈರಿಂಗ್‌ ಕೇಸ್‌: ಗಾಯಗೊಂಡಿದ್ದ ಆರೋಪಿ ಸಾವು!

10:04 AM Mar 20, 2024 | Team Udayavani |

ಬೆಂಗಳೂರು: ಹಾಡಹಗಲೇ ಕೊಡಿಗೇಹಳ್ಳಿಯ ದೇವಿನಗರದ ಲಕ್ಷ್ಮೀ ಬ್ಯಾಂಕರ್ಸ್‌ ಆ್ಯಂಡ್‌ ಜುವೆಲ್ಲರ್ಸ್‌ ಗೆ ನುಗ್ಗಿ ದರೋಡೆಗೆ ಯತ್ನಿಸಿದ ಮೂವರು ಅಂತಾ ರಾಜ್ಯ ದರೋಡೆಕೋರರು ಇತ್ತೀಚಿಗೆ ಮಧ್ಯ  ಪ್ರದೇಶ  ದಲ್ಲಿ ಬಂಧಿಸಿದ್ದ ಈಶಾನ್ಯ ವಿಭಾಗದ ಪೊಲೀಸರ ಬೆಂಗಳೂರಿಗೆ ಕರೆದಿದ್ದಾರೆ. ಇದೇ ವೇಳೆ ಘಟನೆ ನಡೆದ ದಿನ ಮತ್ತೋರ್ವ ಆರೋಪಿಯು ತಪ್ಪಾಗಿ ಹಾರಿಸಿದ್ದ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ಸೂರಜ್‌ (30)  ಮೃತಪಟ್ಟಿದ್ದಾನೆ.

Advertisement

ಮಧ್ಯ ಪ್ರದೇಶದ ಮೊರೇನೊ ಮೂಲದ ಖಾನಾ ಪಂಡಿತ್‌ (23), ಆಶು ಪಂಡಿತ್‌(27), ಮೋಸೆ ಅಲಿ ಯಾಸ್‌ ಬಂಟಿ (37) ಬಂಧಿತರು. ಬಂಧಿತರಿಂದ 4 ಪಿಸ್ತೂಲ್‌ಗ‌ಳು, 12 ಜೀವಂತ ಗುಂಡುಗಳು, 2 ಮೊಬೈಲ್‌ ಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿ ಯಾಗಿದ್ದ ಮತ್ತೂಬ್ಬ ವ್ಯಕ್ತಿಯು ತಲೆಮರೆಸಿ  ಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ. 13 ದಿನ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಬಂಧಿತ ಖಾನಾ ಪಂಡಿತ್‌ ಹಾಗೂ ಆಶು ಪಂಡಿತ್‌ ವಿರುದ್ಧ ದೇಶದ ಹಲವೆಡೆ 15ಕ್ಕೂ ಹೆಚ್ಚು ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಹಲವು ರಾಜ್ಯಗಳಲ್ಲಿ ಇವರು ಕಳ್ಳತನ ಮಾಡಿ ಪರಾರಿಯಾಗಿದ್ದು, ಹೊರ ರಾಜ್ಯದ ಪೊಲೀಸರಿಗೆ ಬೇಕಾಗಿದ್ದರು.

ಗುಂಟೇಟು ತಿಂದಿದ್ದ ಆರೋಪಿ ಸಾವು: ಬೈಕ್‌ನಲ್ಲಿ ಆರೋಪಿಗಳು ಪರಾರಿಯಾದಾಗ ಪ್ರತ್ಯಕ್ಷ ದರ್ಶಿ ಯೊಬ್ಬರು ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಇದರಿಂದ ಆರೋಪಿಗಳು ಬೈಕ್‌ನೊಂದಿಗೆ ಗೊರಗುಂಟೆಪಾಳ್ಯ ಕಡೆ ಹೋಗಿರುವುದಾಗಿ ಗೊತ್ತಾಗಿತ್ತು. ಆ ಕಡೆಯಿಂದ ತುಮಕೂರು, ಚಿಕ್ಕಬಳ್ಳಾಪುರ ಮಾರ್ಗವಾಗಿ ಅನಂತಪುರ ರೈಲ್ವೆ ನಿಲ್ದಾಣದ ಮೂಲಕ ಆರೋಪಿಗಳು ರೈಲಿನಲ್ಲಿ ಮಧ್ಯಪ್ರದೇಶದ ಕಡೆಗೆ ಹೋಗಿರುವುದು ತನಿಖೆಯಲ್ಲಿ ಕಂಡು ಬಂದಿತ್ತು.

ಮಾ.16 ರಂದು ಮುಂಜಾನೆ 5.15ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ ರೈಲ್ವೆ ನಿಲ್ದಾಣಕ್ಕೆ ತೆರಳಿದ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ ಹಚ್ಚಿತ್ತು. ಆ ವೇಳೆ ಸೂರಜ್‌ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಆತ   ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫ‌ಲಿಸದೇ ಮಧ್ಯಪ್ರದೇಶದ ಗ್ವಾಲಿಯರ್‌ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಿಂದ ಪರಾರಿಯಾಗುವ ವೇಳೆ ಕತ್ತಿಗೆ ಗಾಯಗೊಂಡಿದ್ದ ಸೂರಜ್‌ನನ್ನು ಆಂಧ್ರಪ್ರದೇಶದ ಆನಂತ ಪುರಕ್ಕೆ ಕರೆದೊಯ್ದು ಅಲ್ಲಿಂದ ರೈಲಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ವಿಳಂಬವಾಗಿದ್ದರಿಂದ ಆತ ಸಾವನ್ನಪ್ಪಿರುವುದು ಪತ್ತೆಯಾಗಿದೆ.

Advertisement

ಮಾಲೀಕನಿಗೆ 2 ಗುಂಡೇಟು: ಹೊಟ್ಟೆಯ ಭಾಗಕ್ಕೆ ಎರಡು ಗುಂಡು ತಗುಲಿದ್ದ ಜ್ಯುವೆಲ್ಲರಿ ಮಾಲೀಕ ಅಂದಾರಾಮ್‌ ಹೊಟ್ಟೆಯ ಭಾಗದಲ್ಲಿದ್ದ ಎರಡು ಗುಂಡುಗಳ ಪೈಕಿ ಒಂದು ಗುಂಡನ್ನು ಹೊರತೆಗೆಯ ಲಾಗಿದ್ದು, ಮತ್ತೂಂದು ದೇಹದಲ್ಲಿಯೇ ಉಳಿದಿದೆ. ಇದಕ್ಕೆ ಚಿಕಿತ್ಸೆ ಮುಂದುವರಿದಿದೆ. ತೊಡೆಯ ಭಾಗಕ್ಕೆ ಒಂದು ಗುಂಡು ತಗುಲಿ ತೀವ್ರವಾದ ರಕ್ತಗಾಯ ವಾಗಿದ್ದ ಆಪುರಾಮ್‌ನನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಲತೊಡೆಯ ಭಾಗಕ್ಕೆ ತಗುಲಿದ್ದ ಗುಂಡನ್ನು ಹೊರತೆಗೆಯಲಾಗಿದೆ.

ದರೋಡೆಗೆ ಬೈಕ್‌ ಕದ್ದಿದ್ದರು! :

ಬಂಧಿತ ಆರೋಪಿಗಳನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ಕೃತ್ಯಕ್ಕೆ ಮೊದಲೇ ಸಂಚು ರೂಪಿಸಿದ್ದರು. ದರೋಡೆ ಮಾಡಲೆಂದೇ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಒಂದು ಬೈಕ್‌ ಹಾಗೂ ವಿದ್ಯಾರಣ್ಯಪುರದಲ್ಲಿ ಮತ್ತೂಂದು ಬೈಕ್‌ ಕಳವು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next