Advertisement

ಇಂದು ಜೇವರ್ಗಿ ಬಂದ್‌ಗೆ ಕರೆ

02:54 PM Feb 22, 2017 | |

ಜೇವರ್ಗಿ: ಶ್ರೀರಾಮಸೇನಾ ತಾಲೂಕು ಅಧ್ಯಕ್ಷ ಶರಣು ಕೋಳಕೂರ ಕುಟುಂಬದವರ ಮೇಲೆ ಕಿಡಿಗೇಡಿಗಳು ನಡೆಸಿದ ಹಲ್ಲೆ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಶ್ರೀರಾಮಸೇನಾ ರಾಜ್ಯ ಗೌರವಾಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 

Advertisement

ಶ್ರೀರಾಮಸೇನೆ ರಾಸಣಗಿ ಎಂಬ ಫೇಸ್‌ಬುಕ್‌ ಖಾತೆಗೆ ಬೇರೆಯವರು ಅಶ್ಲೀಲ ಚಿತ್ರವೊಂದನ್ನು ಟ್ಯಾಗ್‌ ಮಾಡಿದ್ದರು. ಘಟನೆ ನಡೆದ ನಂತರ ಶುಕ್ರವಾರ ರಾತ್ರಿಯಿಂದ ಸಂಘಟನೆ ಅಧ್ಯಕ್ಷ ಶರಣು ಕೋಳಕೂರ ಅವರ ಮನೆಗೆ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿತ್ತು. ಆದರೆ ಶನಿವಾರ ಬೆಳಗ್ಗೆ ಪೊಲೀಸರು ಏಕಾಏಕಿ ಕಾರಣವಿಲ್ಲದೇ ಅಲ್ಲಿಂದ ನಿರ್ಗಮಿಸಿದ ಕೆಲವೇ ಕ್ಷಣಗಳಲ್ಲಿ ಕೋಳಕೂರ ಅವರ ಕುಟುಂಬದವರ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು. 

ಎರಡು ತಿಂಗಳ ಹಿಂದೆ ಜೋಪಡಪಟ್ಟಿಯ ಮದೀನಾ ಮಸೀದಿ ಬಳಿ ಒಂದು  ಕೋಮಿನ ಜನ ಸರ್ಕಾರಿ ಸ್ಥಳ ಅತಿಕ್ರಮಿಸಿಕೊಂಡಿದ್ದರು. ಈ ಬಗ್ಗೆ ಶರಣು ಕೋಳಕೂರ ಹಾಗೂ ಕಾರ್ಯಕರ್ತರು ಹೋರಾಟ ಕೈಗೊಂಡು ಆ ಸ್ಥಳವನ್ನು ತೆರವುಗೊಳಿಸಿದ್ದರು. ಈ ಸೇಡಿನಿಂದಲೇ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ಶರಣು ಕೋಳಕೂರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕಾಗಿ 48 ಗಂಟೆಗಳ ಗಡುವು ನೀಡಲಾಗಿತ್ತು.

ಆದರೆ 72 ಗಂಟೆಗಳು ಕಳೆದರೂ ಇನ್ನೂ ಎಲ್ಲಾ ಆರೋಪಿಗಳ ಬಂಧನವಾಗಿಲ್ಲ. ಆದ್ದರಿಂದ  ಹಲ್ಲೆ ಘಟನೆ ಖಂಡಿಸಿ ಹಾಗೂ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ಬುಧವಾರ ಜೇವರ್ಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ, ಮರೆಪ್ಪ ಬಡಿಗೇರ, ಬಸವರಾಜ ಮಾಲಿಪಾಟೀಲ, ಶಿವು ಪಾಟೀಲ ಯಡ್ರಾಮಿ, ಷಣ್ಮುಖಪ್ಪ ಸಾಹು ಗೋಗಿ, ರವಿ ಕೋಳಕೂರ,

ಮರೆಪ್ಪ ಕೋಬಾಳಕರ್‌, ಸುರೇಶ ತಳವಾರ, ಪ್ರವೀಣ ಕುಂಟೋಜಿಮಠ, ಶಿವಾನಂದ ಮಾಕಾ, ಶರಣು ಕೋಳಕೂರ, ಸಿದ್ಧು ಗಜ, ಈಶ್ವರ ಹಿಪ್ಪರಗಿ, ಬಸವರಾಜ ಲಾಡಿ, ಪುರಸಭೆ ಸದಸ್ಯರಾದ ಮಾನಪ್ಪ ಗೋಗಿ, ಶರಣಗೌಡ ಸರಡಗಿ, ವಿಶ್ವನಾಥ ಇಮ್ಮಣ್ಣಿ, ಗುಂಡುಸಾಹು ಗೋಗಿ, ಮಲ್ಲಿಕಾರ್ಜುನ ಆದ್ವಾನಿ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಧರ್ಮು ಚಿನ್ನಿ ರಾಠೊಡ, ಅಶೋಕ ಗುಡೂರ ಭಾಗವಹಿಸಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next