Advertisement

ಕತಾರ್‌ ವೇಟ್ ಲಿಫ್ಟಿಂಗ್: 27 ದಾಖಲೆ ಸ್ಥಾಪಿಸಿದ ಭಾರತದ ಜೆರೆಮಿ ಲಾಲ್ರಿನ್ನುಂಗ

03:51 PM Dec 22, 2019 | keerthan |

ದೋಹಾ (ಕತಾರ್‌): ಇಲ್ಲಿ ನಡೆಯುತ್ತಿರುವ 6ನೇ ಕತಾರ್‌ ಅಂತಾರಾಷ್ಟ್ರೀಯ ವೇಟ್‌ ಲಿಫ್ಟಿಂಗ್ ಕೂಟದಲ್ಲಿ, ಯುವ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜೆರೆಮಿ ಲಾಲ್ರಿನ್ನುಂಗ ಪುರುಷರ 67 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

Advertisement

ಶುಕ್ರವಾರ ತಡರಾತ್ರಿ ನಡೆದ ವೇಟ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಿಜೋರಾಂನ 17ರ ಹರೆಯದ ಲಾಲ್ರಿನ್ನುಂಗ ಒಟ್ಟು 306 ಕೆಜಿ ಭಾರವೆತ್ತುವ ಮೂಲಕ ತಮ್ಮ ವೈಯಕ್ತಿಕ ದಾಖಲೆಯನ್ನು ಉತ್ತಮ  ಪಡಿಸಿದರು.

ಸ್ನ್ಯಾಚ್‌ ವಿಭಾಗದಲ್ಲಿ 140 ಕೆಜಿ, ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 166 ಕೆಜಿ ಭಾರವೆತ್ತಿ ರಜತ ಪದಕ ಜಯಿಸಿದರು. ಒಟ್ಟಾರೆಯಾಗಿ ಜೆರೆಮಿ 27 ದಾಖಲೆಗಳನ್ನು ಸ್ಥಾಪಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next