ವಾಷಿಂಗ್ಟನ್: ಅಮೆರಿಕದ ಖ್ಯಾತ ದಿನಪತ್ರಿಕೆ “ದಿ ವಾಷಿಂಗ್ಟನ್ ಪೋಸ್ಟ್’ ಅನ್ನು ಮಾಲಕ ಜೆಫ್ ಬಿಜೋಸ್ ಮಾರಾಟಕ್ಕಿಟ್ಟಿದ್ದಾರೆಯೇ? “ಹೌದು’ ಎಂದು “ದಿ ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ. ಇದನ್ನು ಮಾರಿ ವಾಷಿಂಗ್ಟನ್ ಕಮಾಂಡರ್ಸ್ ಫುಟ್ ಬಾಲ್ ತಂಡವನ್ನು ಕೊಳ್ಳುವುದು ಅವರ ಯೋಚನೆ ಎಂದು ಹೇಳಲಾಗಿದೆ.
ಈ ರೀತಿಯ ಮಾತುಕತೆಗಳಿರುವುದು ಸತ್ಯ ಎಂದು ಇನ್ನೂ ಇಬ್ಬರು ಹೇಳಿದ್ದಾರೆ. ಆದರೆ ಅವರಿಬ್ಬರೂ ಹೆಸರನ್ನು ಬಹಿರಂಗಪಡಿಸಲು ಒಪ್ಪಿಕೊಂಡಿಲ್ಲ. ಆದರೆ ಸ್ವತಃ ಬಿಜೋಸ್ ಮಾತ್ರ “ವಾಷಿಂಗ್ಟನ್ ಪೋಸ್ಟ್’ ಮಾರಾಟಕ್ಕಿಲ್ಲ ಎಂದು ಖಚಿತಪಡಿಸಿದ್ದಾರೆ. ವಿಚಿತ್ರವೆಂದರೆ, ಸುದ್ದಿಯನ್ನು ಪ್ರಕಟಿಸಿದ “ನ್ಯೂಯಾರ್ಕ್ ಪೋಸ್ಟ್’ ಮಾಲಕ ಸಂಸ್ಥೆ “ನ್ಯೂಸ್ ಕಾರ್ಪ್’ ಕೂಡ ವಾಷಿಂಗ್ಟನ್ ಪೋಸ್ಟ್ ಮಾರಾಟಕ್ಕಿಲ್ಲ ಎಂದಿದೆ!
ನ್ಯೂಯಾರ್ಕ್ ಪೋಸ್ಟ್ ವರದಿಗಳ ಪ್ರಕಾರ, ವಾಷಿಂಗ್ಟನ್ ಕಮಾಂಡರ್ಸ್ ಫುಟ್ ಬಾಲ್ ತಂಡದ ಮಾಲಕ ಡ್ಯಾನ್ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರನ್ನು ಪಾರು ಮಾಡುವುದು ಬಿಜೋಸ್ ಉದ್ದೇಶ ಎನ್ನಲಾಗಿದೆ.ಇದರಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂದು ಕಾಲವೇ ಹೇಳಬೇಕು. ಜೆಫ್ ಬಿಜೋಸ್ ವಿಖ್ಯಾತ ಅಮೆಜಾನ್ ಆನ್‌ಲೈನ್ ಸಂಸ್ಥೆಯ ಮಾಲಕ ಎನ್ನುವುದು ಗಮನಾರ್ಹ.