ನಾವೀಗ ಹೆಚ್ಚಾಗಿ ಬಳಸುವ ಪದ ಒಂದಿದೆ. ಅದೆಂದರೆ ಒತ್ತಡ. ಪತಿ ಮನೆಗೆ ಬಂದ ಕೂಡಲೇ ಆಸನಕ್ಕೆ ಒರಗುತ್ತಾ ಹೇಳುವ ವಾಕ್ಯ, “ಲೇ..ಆಫೀಸಿನಲ್ಲಿ ಬಹಳ ಒತ್ತಡ. ಕಷ್ಟ ಕಣೆ. ಹೀಗೇ ಇದ್ದರೆ ನನ್ನ ಕೈಲಾಗೋಲ್ಲ. ರಾಜೀನಾಮೆ ಬಿಸಾಕಿ ಬರುತ್ತೇನೆ’. ಇದು ಒಬ್ಬರ ಮಾತಲ್ಲ. ಎಲ್ಲರ ಬಾಯಲ್ಲೂ ಸಾಧ್ಯವೇ ಇಲ್ಲವೆ ನ್ನುವ ಒತ್ತಡ ಎನ್ನುತ್ತಾರೆ.
ಇಂಥದ್ದೇ ಒತ್ತಡದ ಸಮಸ್ಯೆಯನ್ನು ಹೊತ್ತು ವ್ಯಕ್ತಿಯೊಬ್ಬ ಗುರುವಿನ ಬಳಿಗೆ ಹೋದನು. ಗುರುವೂ ಒಂದಿಷ್ಟು ಜನರಿಗೆ ಇದರ ಕುರಿತೇ ತಿಳಿ ಹೇಳುತ್ತಿದ್ದರು. ಒಂದಿಷ್ಟು ಕಾದು ಕುಳಿತ. ಬಳಿಕ ಗುರುವು ಬಿಡುವು ಆದರು. ಒಡನೆಯೇ ಗುರುಗಳ ಕಾಲಿಗೆ ಎರಗಿದ ಆತ “ಗುರು ಗಳೇ, ನನ್ನದು ಒತ್ತಡದ ಸಮಸ್ಯೆ. ಕಚೇರಿ ಸಾಕೆಂದು ಮನೆಗೆ ಬಂದರೆ ಮನೆಯಲ್ಲಿ ನೂರಾರು ಸಮಸ್ಯೆ. ಅದರಿಂದ ಮತ್ತೆ ಒತ್ತಡ. ಏನು ಮಾಡುವುದೆಂದೇ ಗೊತ್ತಾ ಗುವುದಿಲ್ಲ. ಎಲ್ಲವೂ ಬಿಟ್ಟು ದೂರ ಎಲ್ಲಾ ದರೂ ಹೋಗಿ ಬಿಡಬೇಕೆಂದಿದ್ದೇನೆ’ ಎಂದ. ಗುರುಗಳು ಎಲ್ಲವನ್ನೂ ಕೇಳಿಸಿ ಕೊಂಡು, ಒಳ್ಳೆಯದು. ಹೋಗಿ ಬಿಡು ಎಂದರು. ಇವನಿಗೆ ನನ್ನ ಸಮಸ್ಯೆಗೆ ಉತ್ತರ ಇಷ್ಟೊಂದು ಸರಳವಾಗಿದೆಯೇ ಎನಿಸಿತು. “ಅಷ್ಟೊಂದು ಸುಲಭವೇ?’ ಎಂದು ಗುರುಗಳಲ್ಲಿ ಮತ್ತೆ ಕೇಳಿದ.
ಅದಕ್ಕೆ ಗುರುಗಳು, “ನಿನಗೆ ಸಮಸ್ಯೆಯೂ ಗೊತ್ತಿದೆ. ಪರಿಹಾರವೂ ನಿನ್ನಲ್ಲೇ ಇದೆ ಎಂಬುದೂ ತಿಳಿದಿದೆ’ ಎನ್ನುತ್ತಲೇ, ಒತ್ತಡ ಎನ್ನುವುದು ಸ್ವಾಭಾವಿಕವಾದದ್ದು. ಯಾವುದೂ ಒತ್ತಡವಿಲ್ಲದೇ ಇರದು. ಒಂದು ಸಸಿಯನ್ನೇ ತೆಗೆದುಕೋ, ಅದಕ್ಕೂ ದೊಡ್ಡದಾಗಬೇಕು, ಫಲ ಕೊಡ ಬೇಕು ಎಂಬ ಒತ್ತಡ ಇರುತ್ತದೆ. ಇದು ಉದ್ದೇಶದ ಒತ್ತಡ. ಎಲ್ಲರಿಗೂ ಎಲ್ಲ ದಕ್ಕೂ ಇದು ಸಾಮಾನ್ಯ. ಯಾವುದೂ ಒತ್ತಡವಿರದೇ ಇರದು. ಕೆಲವೊಮ್ಮೆ ಅದನ್ನು ನಿರ್ವಹಿಸುವಾಗ ಗಲಿಬಿಲಿ ಆಗುತ್ತೇವೆ. ಎಲ್ಲವೂ ನಾವಂದು ಕೊಂಡಂತೆ ಆಗದೇ ಇದ್ದಾಗ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ. ಆಗ ನಮ್ಮ ಮನಸ್ಸು ಹಾಗೂ ಮೆದುಳು ಹತೋಟಿ ತಪ್ಪುತ್ತದೆ. ಭಾವನೆಗಳನ್ನೂ ನಿಯಂತ್ರಿಸ ಲಾಗುವುದಿಲ್ಲ. ತದನಂತರ ಬಡಬಡಿ ಸತೊಡಗುತ್ತೇವೆ. ಆಗ ಮನಸ್ಸು- ಭಾವನೆ ಗಳಿಗೆ ನಮ್ಮ ಮೆದುಳನ್ನು ಕೊಟ್ಟು ಬಿಡುತ್ತೇವೆ. ಮನಸ್ಸೆಂಬುದು ಮಂಗನಿದ್ದ ಹಾಗೆ. ತೋಚಿದಂತೆ ಮಾಡುತ್ತಾ ಹೋಗುತ್ತದೆ. ಸಮಸ್ಯೆ ಇರುವುದು ಒತ್ತಡ ದಲ್ಲಲ್ಲ, ಅದನ್ನು ನಿರ್ವ ಹಿಸಲು ಬಾರದ್ದರಲ್ಲಿ. ಅದನ್ನು ಕಲಿಯಬೇಕು. ಮನಸ್ಸು ಮತ್ತು ಮೆದುಳನ್ನು ಕ್ರಿಯಾಶೀಲ ಗೊಳಿಸಿಕೊಂಡು ಒತ್ತಡ ನಿರ್ವಹಣೆ ಯನ್ನು ಕಲಿಸಬೇಕು. ಆಗ ಭಾವನೆಗಳೂ ನಮ್ಮ ಮಾತನ್ನು ಕೇಳುತ್ತವೆ. ಆದ ಕಾರಣ ಪರಿಹಾರ ಅಥವಾ ಮದ್ದು ಬೇಕಾದದ್ದು ಸಮಸ್ಯೆಗಲ್ಲ ; ಸಮಸ್ಯೆಯ ನಿರ್ವಹಣೆ ನೆಲೆಗೆ ಎಂದರು.
ಮೊದಲು ಒತ್ತಡದ ನೆಲೆಯನ್ನು ಅರ್ಥ ಮಾಡಿಕೊ. ಆಮೇಲೆ ಅದನ್ನು ನಿರ್ವಹಿ ಸಲು ಕಲಿ. ಬರೀ ಒತ್ತಡ ಎಂದು ಬೊಬ್ಬೆ ಹಾಕಿದರೂ ಅದು ನಿವಾರಣೆಯಾಗದು. ಎಲ್ಲೋ ಬಿಟ್ಟು ದೂರ ಹೋಗುತ್ತೇನೆ ಎಂದ ಕೂಡಲೇ ಅದು ನಿನ್ನನ್ನೇನೂ ಬಿಡದು. ಸಮಸ್ಯೆಯಿಂದ ಪಲಾಯನಗೈ ಯುವುದು ಪರಿಹಾರವಲ್ಲ ಎಂದರು ಗುರುಗಳು.
ನಾವು ನಿತ್ಯವೂ ಒತ್ತಡದ ಜಪವನ್ನೇ ಮಾಡುತ್ತೇವೆ, ಅದನ್ನು ಅರಗಿಸಿಕೊಳ್ಳಲು ಕಲಿಯಬೇಕು. ಅದುವೇ ಬದುಕೂ ಸಹ. ಒತ್ತಡವಿಲ್ಲದ ಬದುಕನ್ನು ಕಲ್ಪಿಸಲೂ ಸಾಧ್ಯವಿಲ್ಲ. ಅದು ಸಾಧ್ಯವೂ ಇಲ್ಲ.
ಒತ್ತಡ ಸ್ವಾಭಾವಿಕ ಎಂಬು ದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಆಗ ಅದನ್ನು ನಿರ್ವಹಿಸುವುದನ್ನು ಕಲಿಯುತ್ತೇವೆ.
ಒತ್ತಡವೆಂಬ ಸವಾಲನ್ನು ನಾವು ಮೆಟ್ಟಿ ನಿಲ್ಲುತ್ತೇವೆ. ಬದುಕಿನಲ್ಲಿ ಮುಂದಿಟ್ಟ ಹೆಜ್ಜೆಯಿಂದ ಹಿಂದೆ ಸರಿಯುವುದಿಲ್ಲ, ಬದಲಾಗಿ ಮುನ್ನುಗ್ಗುತ್ತೇವೆ. ನಮ್ಮ ಗುರಿ ಸಾಧನೆಯ ಹಾದಿಯಲ್ಲಿ ಎದುರಾಗುವ ಒತ್ತಡವೆಂಬ ಮುಳ್ಳಿನ ಪೊದೆಯನ್ನು ಕಿತ್ತೆಸೆಯಲು ಸಾಧ್ಯವಾಗದಿದ್ದರೂ ಅದನ್ನು ಬದಿಗೆ ಸರಿಸಿ ಮುನ್ನಡೆ ಯುವುದು ಕಷ್ಟಸಾಧ್ಯವೇನಲ್ಲ.
(ಸಾರ ಸಂಗ್ರಹ)