Advertisement

ಒಳಗೇನೂ ಇಲ್ಲದ ಬೀಜ; ಅದರಿಂದ ಮರ!

12:05 AM Mar 12, 2021 | Team Udayavani |

“ನಾನು ಯಾರು? ನನ್ನೊಳಗೆ ಇರುವುದು ಏನು?’ – ಎಳೆಯ ಬಾಲಕ ಶ್ವೇತಕೇತು ಅಪ್ಪನ ಮುಂದೆ ಎತ್ತಿದ ಪ್ರಶ್ನೆ ಇದು.

Advertisement

ನಾವು – ನೀವಾಗಿದ್ದರೆ ಏನೋ ಒಂದು ಹೇಳಿ ಸಾಗಹಾಕುತ್ತಿದ್ದೆವೇನೋ! ಆದರೆ ಅಪ್ಪ ಉದ್ಧಾಲಕರು ಬಹುದೊಡ್ಡ ಮುನಿ. ಬಾಲ್ಯದಲ್ಲಿ ಅವರ ಹೆಸರು ಆರುಣಿ. ಧೌಮ್ಯ ಋಷಿಗಳ ಶಿಷ್ಯರಾಗಿ ದ್ದವರು. ಆಗೊಂದು ದಿನ ಗದ್ದೆಯಿಂದ ನೀರು ಕೋಡಿ ಹರಿದು ಹೋಗುವುದನ್ನು ತಡೆಯುವಂತೆ ಗುರುಗಳು ನೀಡಿದ ಆದೇಶವನ್ನು ಪಾಲಿಸು ವುದಕ್ಕಾಗಿ ಬದುವಿಗೆ ಅಡ್ಡಲಾಗಿ ರಾತ್ರಿಯಿಡೀ ಮಲಗಿದ್ದವನು ಆರುಣಿ. ಗುರು ಆದೇಶ ಪರಿ ಪಾಲನೆಯ ಈ ಪರಾ ಕಾಷ್ಠೆಗಾಗಿ ಉದ್ಧಾಲಕ ಎಂಬ ನಾಮಧೇಯ ವನ್ನೂ ಜ್ಞಾನವನ್ನೂ ಅನುಗ್ರಹವಾಗಿ ಪಡೆದವರು. ಅವರ ಮಗ ಶ್ವೇತಕೇತು. ಬಾಲ್ಯದಿಂದಲೇ ಜ್ಞಾನದಾಹಿ. ಅವನು ಕೇಳಿದ್ದು ಅಷ್ಟೇ ಕಷ್ಟದ ಪ್ರಶ್ನೆ. ಬೇರಾರಾದರೂ ಆಗಿದ್ದರೆ ಉದ್ಧಾಲಕ ಮುನಿಗಳು ಸುಲಭವಾಗಿ ಉತ್ತರಿಸುತ್ತಿದ್ದರು; ಮಗು ಕೇಳಿದ್ದಕ್ಕೆ ಅವನಿಗರ್ಥವಾಗುವ ಹಾಗೆ ಉತ್ತರಿಸ ಬೇಕಲ್ಲ. ಹಾಗಾಗಿ ಒಂದು ಗೋಳಿಹಣ್ಣನ್ನು ತರುವಂತೆ ಹೇಳಿದರು. ಅವನು ಓಡಿ ಹೋಗಿ ತಂದ.

“ಹಣ್ಣನ್ನು ಕತ್ತರಿಸು, ಒಳಗೇನಿದೆ?’ ಉದ್ಧಾಲಕ ಮುನಿಗಳು ಪ್ರಶ್ನಿಸಿದರು. “ನೂರಾರು ಸಣ್ಣ ಸಣ್ಣ ಬೀಜಗಳಿವೆ ಅಪ್ಪಾ’ ಎಂಬುತ್ತರ ಬಂತು.

“ಈಗ ಒಂದು ಬೀಜವನ್ನು ಎತ್ತಿಕೋ. ಅದನ್ನೂ ಕತ್ತರಿಸು, ಅದರೊಳಗೆ ಏನಿದೆ’ ಎಂದರು ತಂದೆ. ಶ್ವೇತಕೇತು ಹಾಗೆಯೇ ಮಾಡಿ “ಏನೂ ಇಲ್ಲ, ಶೂನ್ಯ’ ಎಂದ.

“ಆ ಶೂನ್ಯದಿಂದಲೇ ಮೊಳಕೆ ಒಡೆದು, ಗಿಡವಾಗಿ, ದೊಡ್ಡ ಆಲದ ಮರ ಬೆಳೆಯುತ್ತದೆ. ಆದರೆ ಬೀಜದ ಮಧ್ಯಭಾಗದಲ್ಲಿ ಏನೂ ಇರುವುದಿಲ್ಲ, ಶೂನ್ಯ ಮಾತ್ರ. ನಿನ್ನ, ನನ್ನ ವಿಚಾರ ದಲ್ಲಿಯೂ ಇದೇ ನಿಜ. ಬೀಜದ ಒಳಗಿರುವ ಶೂನ್ಯವೇ ನಿನ್ನ ಒಳಗೂ ಇದೆ’ ಎಂದರು ಉದ್ಧಾಲಕರು.

Advertisement

ಶ್ವೇತಕೇತು ಆ ಪರಮ ಸತ್ಯವನ್ನು ದಿನಗಟ್ಟಲೆ ಧ್ಯಾನಿಸಿದ. ಆಗ ಮತ್ತೂಂದು ಪ್ರಶ್ನೆ ಉದ್ಭವಿಸಿತು. ಅಪ್ಪನೆದುರು ಬಂದು, “ನೀವಂದದ್ದನ್ನು ಧ್ಯಾನಿಸಿ ಅನು ಭವಿಸಿದೆ. ಆದರೂ ಕೆಲವು ವಿಚಾರಗಳು ಮಸುಕಾಗಿವೆ. ಶೂನ್ಯದಿಂದಲೇ ಎಲ್ಲವೂ ಅಸ್ತಿತ್ವಕ್ಕೆ ಬರುತ್ತವೆ ಎಂಬುದು ನಿಜ. ಆದರೆ ಈ ಶೂನ್ಯ ಮತ್ತು ಅಸ್ತಿತ್ವಗಳು ಪರಸ್ಪರ ತದ್ವಿರುದ್ಧ ಎಂಬಂತೆ ಇವೆಯಲ್ಲ; ಅವು ಒಂದನ್ನೊಂದು ಜತೆಗೂಡುವುದು ಹೇಗೆ?’ ಎಂದು ಕೇಳಿದ.

ಈಗ ಉದ್ಧಾಲಕರು ಒಂದು ಚಮಚ ಸಕ್ಕರೆ ಮತ್ತು ಒಂದು ಲೋಟ ನೀರು ತರಲು ಹೇಳಿ ದರು. ಶ್ವೇತಕೇತು ತಂದ. ಸಕ್ಕರೆಯನ್ನು ನೀರಿಗೆ ಹಾಕಿ ಕಲಸಲು ಹೇಳಿ ದರು.

“ಈಗ ಸಕ್ಕರೆಯನ್ನು ನೀರಿನಿಂದ ಬೇರ್ಪಡಿಸಲು ಸಾಧ್ಯ ವಿದೆಯೇ?’ ಎಂದು ಕೇಳಿದರು ಉದ್ಧಾಲಕರು. “ಇಲ್ಲ, ಸಕ್ಕರೆ ಪೂರ್ಣ ವಾಗಿ ನೀರಿನಲ್ಲಿ ಕರಗಿದೆ’ ಎಂದ ಶ್ವೇತಕೇತು.

“ಈಗ ನೀರಿನ ರುಚಿ ನೋಡು’ ಎಂದರು ತಂದೆ. ಬಾಲಕ “ಸಿಹಿಯಾಗಿದೆ’ ಎಂದು ನುಡಿದ.

“ಸಕ್ಕರೆ ಕಾಣಿಸುತ್ತಿಲ್ಲ ಎಂದರೆ ಅದು ಇಲ್ಲ ಎಂದರ್ಥವಲ್ಲ, ಯಾಕೆಂದರೆ ನೀರು ಸಿಹಿಯಾಗಿದೆ. ಶೂನ್ಯ ಮತ್ತು ಅಸ್ತಿತ್ವಗಳ ಕಥೆಯೂ ಹೀಗೆಯೇ. ಅವುಗಳ ಕೂಡ ಸಕ್ಕರೆ ಮತ್ತು ನೀರಿ ನಂತೆ ಒಂದರೊಳಗೆ ಇನ್ನೊಂದು ಅಭೇದವಾಗಿ ಬೆರೆತಿರುತ್ತವೆ. ಅವು ಗಳನ್ನು ಬೇರ್ಪಡಿ ಸಲಾಗದು…’ ಗುರು ಉದ್ಧಾಲಕರು ವಿವರಿಸಿದರು.

ಜೀವನ ಮತ್ತು ಮರಣ ಇದೇ ಅಸ್ತಿತ್ವ ಮತ್ತು ಶೂನ್ಯ. ಅವು ಒಂದನ್ನೊಂದು ಬಿಟ್ಟಿಲ್ಲ; ಜತೆ ಜತೆಯಾಗಿವೆ. ಇಲ್ಲಿ ಪ್ರತ್ಯೇಕಿಸುವುದು, ಬೇರ್ಪಡಿಸುವುದು ಎಂಬ ಪದಪ್ರಯೋಗವೂ ಸಮ್ಮತ ಎನಿಸುವುದಿಲ್ಲ; ಏಕೆಂದರೆ ಆ ಪದಗಳು ಎರಡಿವೆ ಎಂಬ ಅರ್ಥವನ್ನು ಕಲ್ಪಿಸುತ್ತವೆ. ನಿಜಕ್ಕೂ ಜೀವನ ಮತ್ತು ಮರಣ ಎರಡಲ್ಲ.

ಶ್ವೇತಕೇತುವಿಗೆ ಆಗ ಅರ್ಥವಾದ ಪರಮ ರಹಸ್ಯ ಛಾಂದೋಗ್ಯ ಉಪ ನಿಷತ್ತು ಆಗಿ ದಾಖಲಾಗಿದೆ; ನಮ್ಮ – ನಿಮ್ಮ ಅರಿವಿನ ಆಕರವಾಗಿದೆ.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next