Advertisement
ಶಿರಾಡಿ ಘಾಟಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಉಜಿರೆ ದಿನದ 24 ಗಂಟೆಯೂ ಕಾರ್ಯಪ್ರವೃತ್ತವಾಗಿದೆ. ರಾತ್ರಿ ವೇಳೆಯೂ ಅನೇಕ ಬಸ್‌ಗಳು ಹಾಸನ, ಬೆಂಗಳೂರಿಗೆ ಹೋಗಲು ಈ ಮಾರ್ಗವನ್ನು ಅವಲಂಬಿಸಿ ರುವ ಕಾರಣ ರಾತ್ರಿಯೂ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ.
ಕಾಲೇಜು ರಸ್ತೆಯ ಬಸ್ ನಿಲ್ದಾಣದೊಳಗೆ ಬಸ್‌ಗಳ ಬದಲು ಜೀಪುಗಳು ನಿಲ್ಲಲಾರಂಭಿಸಿವೆ. ಇಲ್ಲಿ ಸೂಚನ ಫಲಕಗಳನ್ನು
ಅಳವಡಿಸಿದ್ದರೂ ಬಸ್‌ಗಳು ಹೋಗುವ ಬದಲು ಜೀಪುಗಳು ಪ್ರವೇಶಗೈದಿವೆ. ಲೆಕ್ಕವಿಲ್ಲದ ಬಸ್ ನಿಲುಗಡೆ
ಉಜಿರೆ ಪೇಟೆಯಲ್ಲಿ ಎಷ್ಟು ಕಡೆ ಬಸ್ ನಿಲುಗಡೆ ಇದೆ ಎಂದು ಹೇಳುವುದೇ ಕಷ್ಟ. ಯಾವ ಬಸ್‌ನ ನಿಲುಗಡೆ ಎಲ್ಲಿ ಎಂದೇ ತಿಳಿಯುವುದಿಲ್ಲ. ರಾತ್ರಿ ಸಂಚಾರದ ಕೆಲವು ಬಸ್ ಗಳು ಮುಖ್ಯ ವೃತ್ತದ ಬಳಿಯ ಹೊಟೇಲ್ ಮುಂಭಾಗದಲ್ಲಿ ನಿಲ್ಲುತ್ತವೆ. ಇನ್ನು ಕೆಲವು ಕಾಲೇಜು ರಸ್ತೆಯಲ್ಲಿನ ಸ್ಟ್ಯಾಂಡ್ ನಲ್ಲಿ ನಿಲ್ಲುತ್ತದೆ. ಟಿಕೆಟ್ ರಿಸರ್ವೇಶನ್ ಮಾಡಿಸಿದ ಎಷ್ಟೋ ಮಂದಿ ಗೊಂದಲಕ್ಕೀಡಾಗಿ ಬಸ್ ತಪ್ಪಿಸಿಕೊಂಡದ್ದೂ ಇದೆ. ಉಜಿರೆಗೆ ಯಾವುದಾದರೂ ಒಂದೇ ಕಡೆ ಬಸ್ ನಿಲುಗಡೆ ಇರುವುದು ಒಳಿತು. ಬೆಳಗ್ಗಿನ ಜಾವ ಬೆಂಗಳೂರಿನಿಂದ ಬರುವ ಬಸ್‌ಗಳು ಕೆಲವು ಕಾಲೇಜು ರಸ್ತೆಯ ಬಸ್ ಸ್ಟ್ಯಾಂಡ್ ನಲ್ಲಿ ನಿಂತರೆ ಇನ್ನು ಕೆಲವು ಟಿ.ಸಿ. ಸ್ಟ್ಯಾಂಡ್ ಬಳಿ ನಿಲ್ಲುತ್ತದೆ. ಒಂಟಿ ಮಹಿಳೆಯರಿಗೆ ಇದು ಸಮಸ್ಯೆಯಾಗಿದೆ.
Related Articles
Advertisement