ಆಗ್ರಾ : ಇಲ್ಲಿನ ಫತೇಪುರ್ ಸಿಕ್ರಿ ಪ್ರದೇಶದಲ್ಲಿ ಶನಿವಾರ ಮದುವೆ ದಿಬ್ಬಣವನ್ನು ಸಾಗಿಸುತ್ತಿದ್ದ ಜೀಪೊಂದು ಟ್ರಕ್‌ಗೆ ಢಿಕ್ಕಿ ಹೊಡೆದು ನಾಲ್ವರು ಮೃತಪಟ್ಟು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ರಾ-ಜೈಪುರ ಹೆದ್ದಾರಿಯ ಕೊರೈ ಟೋಲ್ ಪ್ಲಾಜಾದಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ, ರಾಜಸ್ಥಾನದ ಅಜ್ಮೀರ್‌ನಿಂದ ವರ ಮತ್ತು ಅವರ ಕುಟುಂಬ ಸೇರಿದಂತೆ ಮದುವೆಯ ದಿಬ್ಬಣವನ್ನು ಹೊತ್ತ ವಾಹನವು ಬಿಹಾರದ ಪಾಟ್ನಾಗೆ ತೆರಳುತ್ತಿತ್ತು.
ಪೋಲೀಸರ ಪ್ರಕಾರ, ಜೀಪ್ ಚಾಲಕ ಚಾಲನೆ ಮಾಡುವಾಗ ನಿದ್ರೆಗೆ ಜಾರಿದ ಪರಿಣಾಮ ಅಪಘಾತ ಸಂಭವಿಸಿದೆ. ಸ್ಥಳೀಯರು ಮತ್ತು ಟೋಲ್ ಪ್ಲಾಜಾ ಸಿಬಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಜೀಪ್ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಆಗ್ರಾ ಪೊಲೀಸ್ ವರಿಷ್ಠಾಧಿಕಾರಿ (ಪಶ್ಚಿಮ) ಸತ್ಯಜೀತ್ ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ.