ಹೊಸದಿಲ್ಲಿ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಾಗಿ ನಡೆಸುವ ಜೆಇಇ ಮೇನ್-2023 ಎರಡನೇ ಆವೃತ್ತಿಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
ಬರೋಬ್ಬರಿ 43 ಅಭ್ಯರ್ಥಿಗಳು ನೂರಕ್ಕೆ ನೂರು ಎನ್‌ಟಿಎ ಅಂಕಗಳನ್ನು ಪಡೆದಿದ್ದಾರೆ. ಸಿಂಗರಾಜು ವೆಂಕಟ್ ಕೌಂಡಿನ್ಯ ಅವರು ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್‍ಯಾಂಕ್ 1 ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕರ್ನಾಟಕದ ರಿಧಿ ಕಮಲೇಶ್ ಕುಮಾರ್ ಮಹೇಶ್ವರಿ ಅವರು ನೂರಕ್ಕೆ ನೂರು ಎನ್‌ಟಿಎ ಅಂಕಗಳನ್ನು ಪಡೆದಿದ್ದಾರೆ.
ಈ ಮೂಲಕ ಈ ಸಾಧನೆ ಮಾಡಿದ ಏಕೈಕ ಮಹಿಳೆ ಎಂದೆನಿಸಿದ್ದಾರೆ.
ಎಪ್ರಿಲ್ ಮೊದಲ ಮತ್ತು ಎರಡನೇ ವಾರದಲ್ಲಿ ನಡೆದ ಪರೀಕ್ಷೆಯಲ್ಲಿ 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎ.19ರಂದು ಕೀ ಉತ್ತರಗಳನ್ನು ಎನ್‌ಟಿಎ ಬಿಡುಗಡೆ ಮಾಡಿತ್ತು.