Advertisement

ಜೆಇಇ ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ರಾಜ್ಯದ ಶಿಶಿರ್‌ ದೇಶಕ್ಕೇ ಮೊದಲಿಗ

12:49 AM Sep 12, 2022 | Team Udayavani |

ಹೊಸದಿಲ್ಲಿ/ಬೆಂಗಳೂರು: ಐಐಟಿ ಸೇರಿದಂತೆ ಅತ್ಯುನ್ನತ ತಾಂತ್ರಿಕ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ಜೆಇಇ-ಅಡ್ವಾನ್ಸ್ಡ್ ಪ್ರವೇಶ ಪರೀಕ್ಷೆಯ ಫ‌ಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಆರ್‌.ಕೆ. ಶಿಶಿರ್‌ ದೇಶಕ್ಕೆ ಮೊದಲಿಗರಾಗಿದ್ದಾರೆ. ಅಷ್ಟೇ ಅಲ್ಲ, ಟಾಪ್‌ 10ರಲ್ಲಿ ರಾಜ್ಯದಲ್ಲಿ ವ್ಯಾಸಂಗ ಮಾಡಿದ ಇಬ್ಬರಿಗೆ ಸ್ಥಾನ ಸಿಕ್ಕಿರು ವುದು ವಿಶೇಷ.

Advertisement

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿಯೊಬ್ಬರು ಜೆಇಇ- ಅಡ್ವಾನ್ಸ್ಡ್ ನಲ್ಲಿ ದೇಶಕ್ಕೆ ಮೊದಲಿಗರಾಗಿದ್ದಾರೆ. ಶಿಶಿರ್‌ 360 ಅಂಕಗಳಲ್ಲಿ 314 ಅಂಕಗಳನ್ನು ಪಡೆದಿದ್ದಾರೆ. ಅವರು ಜೆಇಇ ಮೈನ್ಸ್‌ನಲ್ಲಿ 56ನೇ ರ್‍ಯಾಂಕ್‌ ಪಡೆದಿದ್ದರಲ್ಲದೆ ಕರ್ನಾಟಕ ಸಿಇಟಿಯ ಬಿ. ಫಾರ್ಮಾ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌, ಎಂಜಿನಿಯರಿಂಗ್‌ನಲ್ಲಿ 4ನೇ ರ್‍ಯಾಂಕ್‌ ಪಡೆದಿದ್ದರು.

ಶಿಶಿರ್‌ ಬೆಂಗಳೂರಿನ ಆರ್‌.ವಿ. ಕೃಷ್ಣಕುಮಾರ್‌ ಮತ್ತು ಕೃಪಾರಾಣಿ ದಂಪತಿಯ ಪುತ್ರ. ಹಾಗೆಯೇ ಬೆಂಗಳೂರಿನ ವಿದ್ಯಾರಣ್ಯಪುರದ ನಾರಾಯಣ ಪಿ.ಯು. ಕಾಲೇಜಿನ ವಿದ್ಯಾರ್ಥಿ ವೆಚ್ಚ ಜ್ಞಾನ ಮಹೇಶ್‌ ಹತ್ತನೇ ರ್‍ಯಾಂಕ್‌ ಪಡೆದುಕೊಂಡಿದ್ದಾರೆ.ಕೆ.ಆರ್‌. ಶಿಶಿರ್‌ ಐಐಟಿ ಬಾಂಬೆ ವಲಯದ ವ್ಯಾಪ್ತಿಯಲ್ಲಿದ್ದಾರೆ.

ಐಐಟಿ ದಿಲ್ಲಿ ವಲಯದಲ್ಲಿ ತನಿಷ್ಕಾ ಕಾಬ್ರಾ ವಿದ್ಯಾರ್ಥಿನಿಯರ ವಿಭಾಗ ದಲ್ಲಿ 277 ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅಖೀಲ ಭಾರತ ಮಟ್ಟದಲ್ಲಿ ಇವರ ರ್‍ಯಾಂಕಿಂಗ್‌ 16 ಆಗಿದೆ.

ದಕ್ಷಿಣ ಭಾರತದವರಿಗೆ ಅಗ್ರ ಸ್ಥಾನ
ಐಐಟಿ ಬಾಂಬೆ ವಲಯಕ್ಕೆ ಸೇರಿದ ದಕ್ಷಿಣ ಭಾರತದ ವಿದ್ಯಾರ್ಥಿಗಳೇ ಪ್ರಸಕ್ತ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

Advertisement

ಒಟ್ಟು 1,55,538 ಮಂದಿ ಜೆಇಇ ಅಡ್ವಾನ್ಸ್ಡ್ ಬರೆದಿದ್ದರು. ಇವರಲ್ಲಿ 40,712 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ 6,516 ಮಂದಿ ವಿದ್ಯಾರ್ಥಿನಿಯರು ಇದ್ದಾರೆ ಎಂದು ಪರೀಕ್ಷೆ ನಡೆಸಿದ್ದ ಐಐಟಿ ಬಾಂಬೆಯ ನಿರ್ದೇಶಕ ಚೌಧರಿ ತಿಳಿಸಿದ್ದಾರೆ. ಪೊಲು ಲಕ್ಷ್ಮೀ ಸಾಯಿ ಲೋಹಿತ್‌ ರೆಡ್ಡಿ ಮತ್ತು ಥಾಮಸ್‌ ಬಿಜು ಚೀರಮ್‌ವೆಲಿಲ್‌ ದ್ವಿತೀಯ ಮತ್ತು ತೃತೀಯ ರ್‍ಯಾಂಕ್‌ ಪಡೆದಿದ್ದಾರೆ.

ಐಐಟಿ ಬಾಂಬೆ ಆದ್ಯತೆ
ರ್‍ಯಾಂಕ್‌ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶಿಶಿರ್‌, ಪಾಲಕರು- ಉಪನ್ಯಾಸಕರಿಗೆ ಧನ್ಯ ವಾದ ಹೇಳಿದ್ದಾರೆ. ಮುಂದೆ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡ ಬೇಕು ಎಂದುಕೊಂಡಿದ್ದೇನೆ. ವ್ಯಾಸಂಗ ಮುಗಿದ ಬಳಿಕ ಸ್ಟಾರ್ಟ್‌ಅಪ್‌ ಆರಂಭಿಸಿ ದೇಶಕ್ಕೆ ಹೊಸ ಕೊಡುಗೆ ನೀಡಬೇಕೆಂದು ಕೊಂಡಿದ್ದೇನೆ ಎಂದು ಶಿಶಿರ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next