Advertisement
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿಯೊಬ್ಬರು ಜೆಇಇ- ಅಡ್ವಾನ್ಸ್ಡ್ ನಲ್ಲಿ ದೇಶಕ್ಕೆ ಮೊದಲಿಗರಾಗಿದ್ದಾರೆ. ಶಿಶಿರ್ 360 ಅಂಕಗಳಲ್ಲಿ 314 ಅಂಕಗಳನ್ನು ಪಡೆದಿದ್ದಾರೆ. ಅವರು ಜೆಇಇ ಮೈನ್ಸ್‌ನಲ್ಲಿ 56ನೇ ರ್‍ಯಾಂಕ್ ಪಡೆದಿದ್ದರಲ್ಲದೆ ಕರ್ನಾಟಕ ಸಿಇಟಿಯ ಬಿ. ಫಾರ್ಮಾ ವಿಭಾಗದಲ್ಲಿ ಪ್ರಥಮ ರ್‍ಯಾಂಕ್, ಎಂಜಿನಿಯರಿಂಗ್‌ನಲ್ಲಿ 4ನೇ ರ್‍ಯಾಂಕ್ ಪಡೆದಿದ್ದರು.
Related Articles
ಐಐಟಿ ಬಾಂಬೆ ವಲಯಕ್ಕೆ ಸೇರಿದ ದಕ್ಷಿಣ ಭಾರತದ ವಿದ್ಯಾರ್ಥಿಗಳೇ ಪ್ರಸಕ್ತ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
Advertisement
ಒಟ್ಟು 1,55,538 ಮಂದಿ ಜೆಇಇ ಅಡ್ವಾನ್ಸ್ಡ್ ಬರೆದಿದ್ದರು. ಇವರಲ್ಲಿ 40,712 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ 6,516 ಮಂದಿ ವಿದ್ಯಾರ್ಥಿನಿಯರು ಇದ್ದಾರೆ ಎಂದು ಪರೀಕ್ಷೆ ನಡೆಸಿದ್ದ ಐಐಟಿ ಬಾಂಬೆಯ ನಿರ್ದೇಶಕ ಚೌಧರಿ ತಿಳಿಸಿದ್ದಾರೆ. ಪೊಲು ಲಕ್ಷ್ಮೀ ಸಾಯಿ ಲೋಹಿತ್ ರೆಡ್ಡಿ ಮತ್ತು ಥಾಮಸ್ ಬಿಜು ಚೀರಮ್‌ವೆಲಿಲ್ ದ್ವಿತೀಯ ಮತ್ತು ತೃತೀಯ ರ್‍ಯಾಂಕ್ ಪಡೆದಿದ್ದಾರೆ.
ಐಐಟಿ ಬಾಂಬೆ ಆದ್ಯತೆರ್ಯಾಂಕ್ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶಿಶಿರ್, ಪಾಲಕರು- ಉಪನ್ಯಾಸಕರಿಗೆ ಧನ್ಯ ವಾದ ಹೇಳಿದ್ದಾರೆ. ಮುಂದೆ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡ ಬೇಕು ಎಂದುಕೊಂಡಿದ್ದೇನೆ. ವ್ಯಾಸಂಗ ಮುಗಿದ ಬಳಿಕ ಸ್ಟಾರ್ಟ್‌ಅಪ್ ಆರಂಭಿಸಿ ದೇಶಕ್ಕೆ ಹೊಸ ಕೊಡುಗೆ ನೀಡಬೇಕೆಂದು ಕೊಂಡಿದ್ದೇನೆ ಎಂದು ಶಿಶಿರ್ ಹೇಳಿದ್ದಾರೆ.