Advertisement

ಈ ರಾಜ್ಯದ ಸರಕಾರಿ ನೌಕರರಿಗೆ ಜೀನ್ಸ್, ಟಿ- ಶರ್ಟ್ ನಿಷೇಧ : ಸರಕಾರದ ಆದೇಶದಲ್ಲಿ ಏನಿದೆ

05:51 PM Sep 10, 2021 | Team Udayavani |

ನವ ದೆಹಲಿ : ಇನ್ನು ಮುಂದೆ ಈ ರಾಜ್ಯದ ಸರಕಾರಿ ನೌಕರರು ಜೀನ್ಸ್, ಟಿ – ಶರ್ಟ್ ಧರಿಸುವಂತಿಲ್ಲ ಅದಕ್ಕಾಗಿಯೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಸರಕಾರಿ ನೌಕರರಿಗೆ ನೂತನ ಡ್ರೆಸ್ ಕೋಡ್ ಒಂದನ್ನು ಜಾರಿಗೊಳಿಸಿದ್ದಾರೆ.

Advertisement

ಅಂದಹಾಗೆ ಈ ಹೊಸ ನಿಯಮ ಜಾರಿಗೆ ತಂದಿರುವುದು ಉತ್ತರಾಖಂಡದಲ್ಲಿ ಇಲ್ಲಿನ ಎಲ್ಲಾ ಸರಕಾರಿ ನೌಕರರು ಕಚೇರಿಗಳಲ್ಲಿ ಟಿ-ಶರ್ಟ್ ಮತ್ತು ಜೀನ್ಸ್ ಧರಿಸುವುದನ್ನು ಉನ್ನತ ಅಧಿಕಾರಿಗಳ ಜೊತೆಗಿನ ಸಭೆ ನಡೆಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ನಿರ್ಧಾರಕ್ಕೆ ಬಂದಿದೆ.

ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವಂತಹ ಅನೌಪಚಾರಿಕ ಡ್ರೆಸ್ಸಿಂಗ್ ಅನ್ನು ನಿಷೇಧಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಾಗೇಶ್ವರ ವಿನೀತ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಸೈಫ್-ಕರೀನಾ ಮನೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ| ಮಣ್ಣಿನ ಗಣಪ ತಯಾರಿಸಿದ ತೈಮೂರ್

ಇದರೊಂದಿಗೆ ಜಿಲ್ಲೆಯ ಎಲ್ಲಾ ಸರಕಾರಿ ಅಧಿಕಾರಿಗಳು, ಉದ್ಯೋಗಿಗಳು ಕಚೇರಿಯಲ್ಲಿ ವಸ್ತ್ರ ಸಂಹಿತೆಯನ್ನು ಅನುಸರಿಸಬೇಕು ಮತ್ತು ಉನ್ನತ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಜೀನ್ಸ್, ಟೀ ಶರ್ಟ್ ಧರಿಸಬಾರದು ಎಂದು ಅವರು ಹೇಳಿದರು.

Advertisement

ಈ ಆದೇಶವನ್ನು ಪಾಲಿಸದವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅಧಿಕಾರಿ ಹಾಗೂ ಉದ್ಯೋಗಿಗಳು ಉನ್ನತ ಮಟ್ಟದ ಸಭೆಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಜೀನ್ಸ್, ಟಿ ಶರ್ಟ್ ಬಟ್ಟೆಗಳನ್ನು ಧರಿಸಿವುದು ಗಮನಕ್ಕೆ ಬಂದಿದ್ದು ಇದು ಸಮಂಜಸವಲ್ಲ ಎಂದಿದ್ದಾರೆ.

ಉತ್ತರಾ ಖಂಡದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬರುತ್ತಿರುವುದು ಇದು ಎರಡನೇ ಬಾರಿಯಾಗಿದ್ದು ಈ ಹಿಂದೆಯೂ ಈ ಆದೇಶವನ್ನು ಜಾರಿಗೆ ತರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next