Advertisement

ಜೆಡಿಎಸ್ ಪಕ್ಷದ ಟಾರ್ಗೆಟ್ ಕಾಂಗ್ರೆಸ್ ಮಾತ್ರ, ಬಿಜೆಪಿಯಲ್ಲ: ಸಿದ್ದರಾಮಯ್ಯ

09:55 AM Oct 07, 2021 | Team Udayavani |

ಹುಬ್ಬಳ್ಳಿ: ಜೆಡಿಎಸ್ ಪಕ್ಷಕ್ಕೆ ಯಾವಾಗಲೂ ಕಾಂಗ್ರೆಸ್ ಪಕ್ಷವೇ ಟಾರ್ಗೇಟ್ ವಿನಃ ಬಿಜೆಪಿಯಲ್ಲ. ಹಾಸನ, ಮಂಡ್ಯದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಈ ಭಾಗದ ಉಪ ಚುನಾವಣೆಯಲ್ಲಿ ಕಣಕ್ಕಿಳಿಸುತ್ತಿರುವುದು ಬಿಜೆಪಿಗೆ ಅನುಕೂಲ ಮಾಡಿಕೊಡುವ ಕಾರಣಕ್ಕೆ. ಅದರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬಾರದು ಎಂದಲ್ಲಾ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನೆಲೆಯಿದೆ. ಆದರೆ ಈ ಭಾಗದಲ್ಲಿ ಅಂತಹ ಪ್ರಾಬಲ್ಯವಿಲ್ಲ. ಹೀಗಾಗಿಯೇ ಈ ಭಾಗದ ಚುನಾವಣೆಗಳಲ್ಲಿ ಬಿಜೆಪಿ ಅನುಕೂಲ ಮಾಡಿಕೊಡುವ ಕೆಲಸ ಜೆಡಿಎಸ್ ಪಕ್ಷದಿಂದ ಆಗುತ್ತಿದೆ. ಒಳ ಒಪ್ಪಂದ ಮಾಡಿಕೊಂಡಿದ್ದಾರೋ ಎನ್ನುವುದರ ಬಗ್ಗೆ ತಮಗೆ ಗೊತ್ತಿಲ್ಲ ಎಂದರು.

ಐಎಎಸ್, ಐಪಿಎಸ್ ಗಳಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಆಯ್ಕೆ ಬಗ್ಗೆ ಗೊತ್ತಿಲ್ಲ. ಆದರೆ ಇದೊಂದು ಕೋಮುವಾದ ಸಂಘಟನೆ ಎಂಬುವುದರಲ್ಲಿ ಎರಡು ಮಾತಿಲ್ಲ. ಇದರ ಮುಖವಾಡವೇ ಬಿಜೆಪಿ. ಅವರ ಅಣತಿಯಂತೆ ಬಿಜೆಪಿ ನಡೆದುಕೊಳ್ಳುತ್ತಿದೆ. ಆಡಳಿತದಲ್ಲಿ ಕೋಮುವಾದಿ ಸಂಘಟನೆಗಳ ಹಸ್ತಕ್ಷೇಪ ದೇಶಕ್ಕೆ ಒಳ್ಳೆಯದಲ್ಲ. ಮುಸ್ಲಿಂರ ಮೇಲೆ ಹಿಂದೂಗಳನ್ನು ಎತ್ತಿಗಟ್ಟಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವುದೇ ಇವರ ಕೆಲಸ. ಆದರೆ ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸಿ ಸಮಾನವಾಗಿ ಕಾಣುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ: ಹಾನಗಲ್ ಗೆ ಅಚ್ಚರಿಯ ಆಯ್ಕೆ

ಬಿಜೆಪಿ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಪ್ರತಿ ದಿನವೂ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಏರಿಕೆಯಾಗುತ್ತಿದೆ. ಇದರಿಂದ ಇತರೆ ಅಗತ್ಯ ವಸ್ತುಗಳ ಬೆಲೆ‌ ಕೂಡ ಹೆಚ್ಚಳವಾಗಿ ಬಡವರು ಜೀವನ ನಡೆಸಿದಂತಹ ಪರಿಸ್ಥಿತಿ ತಂದೊಡ್ಡಿದ್ದಾರೆ. ಜನರ ಬದುಕನ್ನು ಮೂರಾಬಟ್ಟಿ ಮಾಡಿದ ಪಕ್ಷಕ್ಕೆ ಯಾಕೆ ಮತ ಹಾಕಬೇಕು ಎನ್ನುವ ಭಾವನೆ ಜನರಲ್ಲಿ ಮೂಡಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next